ವಾರಣಾಸಿ:ಭಾರತದಲ್ಲಿ ಟೊಮ್ಯಾಟೊ ಬೆಲೆ ಇದೀಗ ಚಿನ್ನ-ಬೆಳ್ಳಿ ದರವನ್ನು ಮೀರಿಸುವಂತೆ ಗಗನಕ್ಕೇರಿದೆ. ದುಬಾರಿ ಟೊಮ್ಯಾಟೊ ಖರೀದಿ ಮಾಡಲು ಜನಸಾಮಾನ್ಯರು ಪರದಾಡುತ್ತಿರುವ ವೇಳೆ ಇಲ್ಲೊಬ್ಬ ಅಂಗಡಿ ಮಾಲೀಕ ತನ್ನ ಗ್ರಾಹಕರಿಗೆ 1 ಕೆಜಿ ಟೊಮ್ಯಾಟೊ ಅನ್ನು ಉಚಿತವಾಗಿ ನೀಡುತ್ತಿದ್ದಾರೆ. ಆದ್ರೆ, ಒಂದೇ ಒಂದು ಒಪ್ಪಂದದ ಮೇಲೆ ಮಾತ್ರ ಎಂಬುದು ಇದೀಗ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಇದನ್ನೂ ಓದಿ:Siddaramaiah Blames Modi & BJP For India’s Poor Economy | ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದೇ ಬಿಜೆಪಿ! | BENGALURU
ವಾರಣಾಸಿಯ ಟ್ಯಾಟೂ ಅಂಗಡಿಯ ಮಾಲೀಕರೊಬ್ಬರು ಟೊಮ್ಯಾಟೊ ಬೆಲೆಯಿಂದ ಜನರು ತತ್ತರಿಸುವ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವುದು ಇದೀಗ ಎಲ್ಲರ ಗಮನಸೆಳೆದಿದೆ! ತಮ್ಮ ಅಂಗಡಿಯಲ್ಲಿ ಹಚ್ಚೆ ಹಾಕಿಸಿಕೊಂಡವರಿಗೆ ಒಂದು ಕೆಜಿ ಟೊಮ್ಯಾಟೊವನ್ನು ಉಚಿತವಾಗಿ ಇವರು ನೀಡುತ್ತಿದ್ದಾರೆ. ಈ ಆಫರ್​​ಗೆ ಸುತ್ತಮುತ್ತಲಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಇದನ್ನೂ ಓದಿ:ಬೆಳಗಾವಿ ಜಿಲ್ಲೆಯಲ್ಲಿ ಅನ್ನಭಾಗ್ಯ ಫಲಾನುಭವಿಗಳ ಖಾತೆ ಸೇರಿದ 46 ಕೊಟಿ ರೂ.
ವಾರಣಾಸಿಯ ಸಿಗ್ರಾ ಪ್ರದೇಶದಲ್ಲಿ ಹಚ್ಚೆ ಹಾಕುವ ಮಳಿಗೆಯನ್ನು ಹೊಂದಿರುವ ಮಾಲೀಕ ಅಶೋಕ್ ಗೋಗಿಯಾ, ಟೊಮ್ಯಾಟೊ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಲೀಕ ಅಶೋಕ್, “ನಾವು ಸಾಮಾನ್ಯವಾಗಿ ಸಾವನ್ ತಿಂಗಳಲ್ಲಿ ಹಚ್ಚೆ ಉತ್ಸಾಹಿಗಳನ್ನು ಅಧಿಕ ಸಂಖ್ಯೆಯಲ್ಲಿ ನೋಡುತ್ತೇವೆ, ಏಕೆಂದರೆ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಟೊಮ್ಯಾಟೊ ಬೆಲೆಯಲ್ಲಿ ಏರಿಕೆಯನ್ನು ಕಂಡಾಗ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನನಗೆ ಇದು ಸರಿಯಾದ ಸಮಯ ಎಂದು ಅನಿಸಿತು. ಹಾಗಾಗಿ ಈ ಕೊಡುಗೆಯನ್ನು ಪರಿಚಯಿಸಲು ಯೋಚಿಸಿದೆ ಮತ್ತು ಅದು ನನಗೆ ಲಾಭಕರವಾಯಿತು ಎಂದು ಹೇಳಿದ್ದಾರೆ,(ಏಜೆನ್ಸೀಸ್).
ರಿಲೀಸ್​​ಗೂ ಮುನ್ನವೇ ದಾಖಲೆ ಸೃಷ್ಟಿಸಿದ ಪ್ರಭಾಸ್ ನಟನೆಯ ಸಲಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seven =
Remember me
