ಜಗತ್ತಿನಲ್ಲಿ ಎಂಥೆಂಥಾ ವಿಚಿತ್ರ ಜನರಿರುತ್ತಾರೆ ! ಈಗ ನೋಡಿ ಇಲ್ಲೊಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿ ಕಳೆದ 32 ವರ್ಷಗಳಿಂದ ಮಳೆ ನೀರನ್ನು ಮಾತ್ರ ಕುಡಿಯುತ್ತಿದ್ದಾರೆ.
ನಿಮಗೂ ಅಚ್ಚರಿಯಾಗುತ್ತಿರಬೇಕಲ್ಲ..! ತೆಲಂಗಾಣದ ಸಂಗಾರೆಡ್ಡಿ ಪಟ್ಟಣದ ಪೊನ್ನಾಡಾ ವಸಂತ್​ ಕುಮಾರ್​ ಎಂಬುವರು ಮಳೆಗಾಗಿ ಕಾಯುತ್ತಾರೆ. ಕಳೆದ 32 ವರ್ಷಗಳಿಂದಲೂ ಬೇರೆ ಯಾವುದೇ ಮೂಲದ ನೀರನ್ನೂ ಮುಟ್ಟುತ್ತಿಲ್ಲ. ಕೇಳಿದರೆ, ಮಳೆ ನೀರೇ ನನ್ನ ಆರೋಗ್ಯದ ಗುಟ್ಟು ಎನ್ನುತ್ತಿದ್ದಾರೆ.ಇದನ್ನೂ ಓದಿ:ಏರಿಕೆಯಾಗಲಿದೆ ಖೇಲ್‌ರತ್ನ, ಅರ್ಜುನ ಪ್ರಶಸ್ತಿ ಬಹುಮಾನ ಮೊತ್ತ
ಪ್ರತಿವರ್ಷದ ಮಳೆಗಾಲದಲ್ಲಿಯೂ ಒಂದು ವರ್ಷಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಾರೆ. ತಮ್ಮ ಮನೆಯ ಮೇಲ್ಛಾವಣಿಯಿಂದ ಬೀಳುವ ಮಳೆ ನೀರನ್ನು ಸುಮಾರು ಆರು ಡ್ರಮ್​​ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆ ಡ್ರಮ್​​ಗಳು ಅವರ ಮನೆಯ ಬಾಲ್ಕನಿಯಲ್ಲಿ ಇರುತ್ತವೆ. ಮಳೆ ನೀರು ಸಂಗ್ರಹಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನೂ ಅವರು ಮಾಡಿಕೊಂಡಿದ್ದಾರೆ.ಮಳೆನೀರನ್ನು ಸರಿಯಾಗಿ ಫಿಲ್ಟರ್​ ಮಾಡುತ್ತೇನೆ. ನಂತರ ಅವುಗಳನ್ನು ತಾಮ್ರದ ಪಾತ್ರೆಯಲ್ಲಿ ಸಂರಕ್ಷಿಸಿಟ್ಟುಕೊಳ್ಳುತ್ತೇನೆ. ಕಳೆದ 32 ವರ್ಷಗಳಿಂದಲೂ ಇದನ್ನು ಮಾಡುತ್ತಿದ್ದೇನೆ ಎಂದು ವಸಂತ್​ಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಕುಡಿಯಲು ಶುರು ಮಾಡಿದಾಗಿನಿಂದಲೂ ಒಮ್ಮೆಯೂ ಅನಾರೋಗ್ಯಕ್ಕೆ ಒಳಗಾಗಿಲ್ಲ. ಒಂದು ಔಷಧಿ ತೆಗೆದುಕೊಂಡಿಲ್ಲ. ಸಂಧುನೋವು, ಬಿಪಿ, ಡಯಾಬಿಟಿಸ್​​ನಂತ ಯಾವುದೇ ರೋಗವೂ ನನಗಿಲ್ಲ. ಮಳೆಗಾಲದಲ್ಲೂ ನನಗೆ ಬೆವರು ಬರುತ್ತದೆ. ಮಳೆ ನೀರೇ ಇದಕ್ಕೆಲ್ಲ ಕಾರಣ. ಅದರಲ್ಲಿರುವ ಎಲ್ಲ ರೀತಿಯ ಖನಿಜಾಂಶಗಳು ನನ್ನ ಆರೋಗ್ಯದ ಗುಟ್ಟು ಎಂದಿದ್ದಾರೆ.
ಗಾಯಕ ಎಸ್​​​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 × five =
Remember me
