ಲಕ್ನೋ:ಕರೊನಾ ಕರಿಛಾಯೆ ಮೈಸೂರಿನ ವಿಶ್ವವಿಖ್ಯಾತ ದಸರಾ ಆಚರಣೆಯನ್ನು ಮಂಕಾಗಿಸಿದ್ದರೂ, ಅಯೋಧ್ಯೆಯ ದೀಪೋತ್ಸವ ಈ ಸಲ ಎಂದಿಗಿಂತ ವಿಜೃಂಭಣೆಯಿಂದ ನಡೆಯಲಿದ್ದು, ರಾಮನ ಜನ್ಮಕ್ಷೇತ್ರ ಜಗಮಗಿಸಲಿದೆ.
ರಾಮ ಮಂದಿರ ನಿರ್ಮಾಣ ಆರಂಭಗೊಂಡ ಬಳಿಕದ ಮೊದಲ ದೀಪೋತ್ಸವ ಇದಾಗಿರುವುದರಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಸಲದ ದೀಪೋತ್ಸವವನ್ನು ಎಂದಿಗಿಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯೋಗಿ, ದೀಪೋತ್ಸವ ಕುರಿತ ಸಮಗ್ರ ವಿವರ ನೀಡುವಂತೆ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವರ್ಷದ ದೀಪೋತ್ಸವಕ್ಕೆ ಜನಸಂದಣಿ ಕಡಿಮೆ ಇದ್ದರೂ ವೈಭವೋಪೇತವಾಗಿರುವಂತೆ ಹಾಗೂ ಅದನ್ನು ವರ್ಚುವಲ್​ ಆಗಿ ಜಗತ್ತೇ ನೋಡುವಂತೆ ಆಚರಿಸುವ ಆಸೆಯನ್ನು ಸಿಎಂ ಯೋಗಿ ಹೊಂದಿದ್ದಾರೆ.
ಈ ದೀಪೋತ್ಸವ ಕಾರ್ಯಕ್ರಮವು 2017ರಿಂದ ಯೋಗಿ ಆದಿತ್ಯನಾಥ್​ ಅವರಿಂದಲೇ ಆರಂಭಗೊಂಡಿತ್ತು. ಅಂದು ಸ್ಥಳೀಯರು, ಸ್ವಯಂಸೇವಕರು ಹಾಗೂ ಭಕ್ತರು ಸೇರಿ 1.76 ಲಕ್ಷ ದೀಪಗಳನ್ನು ಬೆಳಗಿದ್ದರು. ಕಳೆದ ವರ್ಷದ ದೀಪೋತ್ಸವದಲ್ಲಿ 5.51 ಲಕ್ಷ ದೀಪಗಳನ್ನು ಬೆಳಗಲಾಗಿತ್ತು. ಇದು ಗಿನ್ನೆಸ್​ ದಾಖಲೆಗೂ ಪಾತ್ರವಾಗಿತ್ತು. (ಏಜೆನ್ಸೀಸ್​)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one + 19 =
Remember me
