ಬೆಂಗಳೂರು:ಕ್ರಿಕೆಟ್​ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್​ಮನ್​, ಬೌಲರ್​, ಕೀಪರ್ ಅಥವಾ ಫೀಲ್ಡರ್​ ತಮ್ಮ ಅತ್ಯಾಕರ್ಷಕ ಪರ್ಫಾರ್ಮೆನ್ಸ್​ನಿಂದ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವುದಿದೆ. ಅಂದರೆ, ಒಂದೊಳ್ಳೆಯ ಶಾಟ್​, ಬೌಲಿಂಗ್, ಕೀಪಿಂಗ್ ಅಥವಾ ಅದ್ಭುತವಾಗಿ ಒಂದು ಕ್ಯಾಚ್​ ಮೂಲಕ ಆಟಗಾರರು ನೋಡುಗರಿಗೆ ವ್ಹಾ ಅನಿಸುವಂತೆ ಮಾಡುವುದಿದೆ.
ಫಾರ್​ ಎ ಚೇಂಜ್.. ಇಲ್ಲಿ ಅಂಥದ್ದೊಂದು ಪರ್ಫಾರ್ಮೆನ್ಸ್​ ಅಂಪೈರ್ ತೋರಿಸಿದ್ದಾರೆ. ಇಲ್ಲಿ ಅಂಪೈರ್​ವೊಬ್ಬರು ವೈಡ್​ಬಾಲ್​ಗೆ ತಲೆಕೆಳಗಾಗಿ ಬಿಟ್ಟಿದ್ದಾರೆ. ಅರ್ಥಾತ್, ಬೌಲರ್ ವೈಡ್​ ಹಾಕಿದ್ದನ್ನು ಈ ಅಂಪೈರ್ ಯಾರೂ ಊಹಿಸಿರದ ರೀತಿಯಲ್ಲಿ ನಿರ್ಣಯ ತೋರಿಸಿದ್ದಾರೆ. ಬೌಲರ್​ ಎಸೆತ ವೈಡ್ ಆದ ತಕ್ಷಣ ಈ ಅಂಪೈರ್ ಎರಡೂ ಕೈಗಳನ್ನೂ ಪಕ್ಕಕ್ಕೆ ಸರಿಸಿ ವೈಡ್ ತೋರಿಸುವ ಬದಲು ಎರಡೂ ಕೈಗಳನ್ನೂ ನೆಲಕ್ಕೆ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಾಲನ್ನು ಮೇಲೆತ್ತಿ ಕೈಗಳ ರೀತಿಯಲ್ಲೇ ಅಗಲಿಸಿ ವೈಡ್ ಎಂದು ತೋರಿಸಿದ್ದಾರೆ.
ಇದನ್ನೂ ಓದಿ:ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!
ಅಂಪೈರ್ ಹೀಗೆ ವಿಶಿಷ್ಟವಾಗಿ ವೈಡ್ ತೋರಿದ ದೃಶ್ಯದ ವಿಡಿಯೋ ತುಣುಕನ್ನು ಸಾರಂಗ್ ಭಲೇರಾವ್ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಹಂಚಿಕೊಂಡಿರುವ ಈ ವಿಡಿಯೋ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ ಟ್ವೀಟನ್ನು 9 ಸಾವಿರಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದು, 1200ಕ್ಕೂ ಅಧಿಕ ಮಂದಿ ರಿಟ್ವೀಟ್​ ಮಾಡಿದ್ದಾರೆ.
Umpire here is a superstar 🤣🤣🤣pic.twitter.com/SbESISXTMy— Sarang Bhalerao (@bhaleraosarang)December 5, 2021
Umpire here is a superstar 🤣🤣🤣pic.twitter.com/SbESISXTMy
‘ಯೋಗ ಮತ್ತು ಕ್ರಿಕೆಟ್ ಭೇಟಿಯಾದಾಗ..’ ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಇದನ್ನು ರಿಟ್ವೀಟ್ ಮಾಡಿಕೊಂಡಿದ್ದರೆ, ಇನ್ನು ಹಲವರು ಇದಕ್ಕೆ ವಿಶೇಷವಾದ ಪ್ರತಿಕ್ರಿಯೆ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.
When Yoga and Cricket meet 😊pic.twitter.com/E8yAtCs0mz— Supriya Sahu IAS (@supriyasahuias)December 6, 2021
When Yoga and Cricket meet 😊pic.twitter.com/E8yAtCs0mz
ಅಂದಹಾಗೆ ಈ ಅಂಪೈರ್ ಹೆಸರು ಡಿಎನ್​ ರಾಕ್​. ನ. 21 ರಂದು ಮಹಾರಾಷ್ಟ್ರದ ಥಾಣೆಯ ಬೊಪ್​ಗಾವ್​ನಲ್ಲಿ ನಡೆದ ಪುರಂದರ ಪ್ರೀಮಿಯರ್ ಲೀಗ್​ನ ಫೈನಲ್​ನಲ್ಲಿ ಈ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ.
Sign in to your account
Please enter an answer in digits:nine + 11 =
Remember me
