ನವದೆಹಲಿ:ನಿಜಕ್ಕೂ ಇದು ಅಂದರ್ ಕಿ ಬಾತ್ ಹೈ. ಅರ್ಥಾತ್ ಇದು ಒಳಉಡುಪಿನ ವಿಷಯ. ಅಷ್ಟಕ್ಕೂ ಇದು ಅಂತಿಂಥ ಒಳಉಡುಪಲ್ಲ. ಏಕೆಂದರೆ ಈ ಅಂಡರ್​ವೇರ್​ ಒಂದೇ ಒಂದು ಇದ್ದರೂ ಸಾಕು, ವಾರಗಟ್ಟಲೆ ಅದೊಂದರಲ್ಲೇ ಕಾಲ ಕಳೆದು ಬಿಡಬಹುದು. ಮಾತ್ರವಲ್ಲ, ಇದನ್ನು ತೊಳೆಯಬೇಕಾದ ಅಗತ್ಯವೂ ಇಲ್ಲ.
ಹೌದು.. ಇಂಥದ್ದೊಂದು ಒಳಉಡುಪನ್ನು ಕಂಪನಿಯೊಂದು ಉತ್ಪಾದಿಸುತ್ತಿದೆ. ‘ದ ವರ್ಲ್ಡ್ಸ್​ ಕ್ಲೀನೆಸ್ಟ್​ ಅಂಡರ್​ವೇರ್’ ಎಂಬ ಟ್ಯಾಗ್​ಲೈನ್​ನೊಂದಿಗೆ ಇಂಥದ್ದೊಂದು ಒಳಉಡುಪನ್ನು ಹರ್ಕ್ಲಿಯಾನ್​ (HercLéon) ಎಂಬ ಕಂಪನಿ ಉತ್ಪಾದಿಸುತ್ತಿದೆ. ಈ ಒಳಉಡುಪನ್ನು ದಿನಗಟ್ಟಲೆ ಅಥವಾ ವಾರಗಟ್ಟಲೆ ಮಾತ್ರವಲ್ಲ ತಿಂಗಳುಗಟ್ಟಲೆ ಬಳಸಿದರೂ ವಾಸನೆ ಬರುವುದಿಲ್ಲ, ಸ್ವಚ್ಛವಾಗಿಯೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ:ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!
ಕ್ರಿಬಿ (Kribi) ಎಂದು ಕಂಪನಿ ನಾಮಕರಣ ಮಾಡಿರುವ ಈ ಒಳಉಡುಪನ್ನು ಹರ್ಕ್​ಫೈಬರ್ ಎಂಬ ವಸ್ತುವಿನಿಂದ ತಯಾರಿಸಲಾಗುತ್ತಿದೆ. ಹರ್ಕ್​ಫೈಬರ್​ ಬಂಬೂ, ಯೂಕಲಿಪ್ಟಸ್​, ಬೀಚ್​ವುಡ್​ ಮತ್ತು ತಾಮ್ರದ ಹದವಾದ ಮಿಶ್ರಣ. ಇದರಲ್ಲಿನ ಅಂಶಗಳು ಬ್ಯಾಕ್ಟೀರಿಯಾಗಳನ್ನು ನಿರಂತರವಾಗಿ ಸಾಯಿಸುತ್ತವೆ. ಹೀಗಾಗಿ ಈ ಅಂಡರ್​ವೇರ್​ಅನ್ನು ಒಗೆಯದೇ ಒಂದಕ್ಕಿಂತ ಹೆಚ್ಚು ದಿನ ಬಳಸಬಹುದು. ಆದರೆ ದಿನಕ್ಕೊಮ್ಮೆ ಒಂದೆರಡು ಗಂಟೆಗಳ ಕಾಲ ಗಾಳಿಯಾಡಲು ಬಿಟ್ಟರೆ ಉತ್ತಮ ಎಂದು ಕಂಪನಿ ಹೇಳಿಕೊಂಡಿದೆ. ಈ ಕಂಪನಿ ಇದೇ ಥರದಲ್ಲಿ ತೊಳೆಯುವ ಅಗತ್ಯವಿರದ ಸಾಕ್ಸ್​, ಟಿ-ಶರ್ಟ್​, ಬೆಡ್​ಶೀಟ್​ಗಳನ್ನು ತಯಾರಿಸುತ್ತಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಜಲಾಶಯದ ದಡದಲ್ಲಿ ವಿಚಿತ್ರ ಜೀವಿ ನೋಡಿ ಬೆಚ್ಚಿಬಿದ್ದ ಜನ: ಇದರ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತೆ!

5 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು : ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eight =
Remember me
