ನವದೆಹಲಿ:ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಆಟೋ ರಿಕ್ಷಾ ಪ್ರಮುಖ ಸಾರಿಗೆ ಸಂಪರ್ಕ ಸಾಧನವಾಗಿದೆ. ಮೊದಲೆಲ್ಲ ಬಸ್​ಗಾಗಿ ಕಾದು ಕುಳಿತುಕೊಳ್ಳುತ್ತಿದ್ದರು. ಬಸ್​ ಹತ್ತಿದ್ದರೂ ಕೂಡ ಅದು ಪ್ರಮುಖ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿತ್ತು. ಆದರೆ, ಈಗ ಪ್ರತಿಯೊಂದು ಹಳ್ಳಿಗಳನ್ನು ಆಟೋ ರಿಕ್ಷಾ ಸಂಪರ್ಕ ಮಾಡಲಿದೆ. ಅಲ್ಲದೆ, ಟಿಕೆಟ್​ ದರ ಕೂಡ ಅಗ್ಗವಾಗಿರುವುದರಿಂದ ಆಟೋ ಎಲ್ಲರ ಪ್ರಮುಖ ಸಂಚಾರಿ ವ್ಯವಸ್ಥೆಯಾಗಿದೆ. ಆದರೆ, ಕೆಲವೊಂದು ಕಡೆ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದ್ದು, ಅಪಘಾತಗಳು ಸಂಭವಿಸಿದ ಉದಾಹರಣೆಗಳೂ ಇವೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಟೋಗೆ ಸಂಬಂಧಿಸಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಾರಣ ಏನೆಂದರೆ, ಆಟೋದಲ್ಲಿ ಪ್ರಯಾಣಿಸುತ್ತಿರುವವರ ಒಟ್ಟು ಸಂಖ್ಯೆ ಕೇಳಿದ್ರೆ ನಿಮಗೆ ತಲೆ ತಿರುಗುವುದು ಗ್ಯಾರೆಂಟಿ.
ಸಾಮಾನ್ಯವಾಗಿ ಆಟೋದಲ್ಲಿ 5 ಮಂದಿ ಪ್ರಯಾಣಿಸಬಹುದು. ಹೆಚ್ಚೆಂದರೆ 10 ರಿಂದ 12 ಪ್ರಯಾಣಿಕರು ತೆರಳಬಹುದು. ಆದರೆ, ವೈರಲ್​ ಆಗಿರುವ ವಿಡಿಯೋದಲ್ಲಿ ಬರೋಬ್ಬರಿ 50 ಮಂದಿ ಒಂದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ? ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು.
ಈ ವಿಡಿಯೋ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಅಲಿರಾಜಪುರಕ್ಕೆ ಸಂಬಂಧಿಸಿದ್ದು, ಒಂದೇ ಆಟೋದಲ್ಲಿ ಸುಮಾರು 50 ಮಂದಿಯನ್ನು ಕುರಿ ತುಂಬಿದ ಹಾಗೆ ತುಂಬಿಕೊಂಡು ಆಟೋ ಚಾಲಕ ಹೋಗುತ್ತಿರುವುದನ್ನು ಕಾಣಬಹುದು. ಆಟೋದ ಸುತ್ತಲೂ ಪ್ರಯಾಣಿಕರು ನೇತಾಡುತ್ತಿರುವುದನ್ನು ಸಹ ನೋಡಬಹುದು. ಈ ವಿಡಿಯೋವನ್ನು ಡಿ.7ರಂದು ಕಾಕ್ವಿ ಹೆಸರಿನ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದೆ.
अलीराजपुर एक्सप्रेस !
मध्य प्रदेश के आदिवासी बहुल अलीराजपुर ज़िले की यही मैट्रो ट्रेन है और यही OLA, UBER। यहां ऑटो में लोग बैठाए नहीं ठूसे जाते है।
यह ज़िला देश के सबसे साफ़ शहर इंदौर से सिर्फ़ 200 किलोमीटर की दूरी पर है।pic.twitter.com/qTDq6WxUjo
— काश/if Kakvi (@KashifKakvi)December 6, 2022

ವೈರಲ್​ ವಿಡಿಯೋ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು, ರಿಜಿಸ್ಟ್ರೇಸನ್​ ನಂಬರ್​ ಆಧಾರದ ಮೇಲೆ ಆಟೋವನ್ನು ಹುಡುಕಿ ದಂಡ ವಿಧಿಸಲು ಪೊಲೀಸರು ಆಟೋವನ್ನು ಹುಡುಕುತ್ತಿದ್ದಾರೆ.(ಏಜೆನ್ಸೀಸ್​)
ಮದ್ವೆ ಫೋಟೋಶೂಟ್​ ವೇಳೆ ತನ್ನನ್ನು ಮರೆತ ವಧುವಿನ ಮೇಲೆ ಆಕ್ರೋಶಗೊಂಡ ಆನೆ ಏನು ಮಾಡಿದೆ ನೋಡಿ!

ಗಣೇಶ್ ದಾದಾಗೆ ಮನಸೋತ ಅಭಿಮಾನಿಗಳು; ವಿಜಯಾನಂದ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ರವಿಚಂದ್ರನ್

ಜಿಮ್ ಹೋಗುವ ಮಧ್ಯ ವಯಸ್ಕರಲ್ಲಿ ಹೆಚ್ಚಿದ ಹೃದಯಾಘಾತ; ಬಚಾವಾಗಲು ಇಲ್ಲಿದೆ ಉಪಾಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
