ನವದೆಹಲಿ:ಮನೆಯಲ್ಲಿ ಯಾರಾದರೂ ಗೊರಕೆ ಹೊಡೆಯುತ್ತಿದ್ದರೆ ಪಕ್ಕದಲ್ಲಿ ಮಲಗಿದ್ದವರಿಗಷ್ಟೇ ತೊಂದರೆ ಆಗುತ್ತದೆ. ಹೆಚ್ಚೆಂದರೆ ಪಕ್ಕದ ರೂಮ್​ನಲ್ಲಿದ್ದವರಿಗೂ ತೊಂದರೆ ಆಗಬಹುದು. ಆದರೆ ಇಲ್ಲೊಬ್ಬರು ಹೊಡೆದ ಗೊರಕೆ ಸುತ್ತಮುತ್ತಲಿನ ಮನೆಗಳವರನ್ನೆಲ್ಲ ಎಚ್ಚರಿಸಿದೆ.
ಇವರ ಗೊರಕೆ ಜನರನ್ನು ನಿದ್ರೆಯಿಂದ ಎಬ್ಬಿಸಿದ್ದಷ್ಟೇ ಅಲ್ಲ, ಆ ರಾತ್ರಿಯ ಮಟ್ಟಿಗೆ ಒಳ್ಳೆಯ ಟೈಮ್​ಪಾಸ್​ ಆಗಿಯೂ ಪರಿಣಮಿಸಿದೆ. ಈ ಗೊರಕೆಯನ್ನು ಕೇಳಿ ಜನ ನಗಲಾರಂಭಿಸಿದ್ದು, ಕೆಲವರಿಗಂತೂ ತಕ್ಷಣಕ್ಕೆ ಒಮ್ಮೆ ವಿಚಿತ್ರವಾಗಿ ಕಾಣಿಸಿದ್ದೂ ಹೌದು.ಅಂದಹಾಗೆ ಇದು ಮೌಲ್ವಿಯೊಬ್ಬರು ಎಂದಿನಂತೆ ಧಾರ್ಮಿಕ ಕಾರ್ಯಕ್ರಮದ ಬಳಿಕ ಮೈಕ್ ಆಫ್ ಮಾಡಲು ಮರೆತು ನಿದ್ರೆ ಹೋಗಿದ್ದರಿಂದ ಹೀಗಾಗಿದೆ ಎನ್ನಲಾಗಿದೆ. ಇದು ಎಲ್ಲಿ-ಯಾವಾಗ ನಡೆದಿದ್ದು ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲವಾದರೂ ಈ ವಿಡಿಯೋ ವೈರಲ್​ ಆಗಿದ್ದು, ಜನರಿಗೆ ಮನರಂಜನೆಯ ವಿಡಿಯೋ ತುಣುಕಾಗಿಯೂ ಪರಿಣಮಿಸಿದೆ. (ಏಜೆನ್ಸೀಸ್)
ಇದೇನು ಗೊತ್ತಾಯ್ತಾ?ವಿವರಗಳಿಗೆhttps://t.co/YaFZZbZDD9ನೋಡಿ…pic.twitter.com/45cj2ci8CE
— Vijayavani (@VVani4U)February 19, 2021

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು!

ಟಿವಿ ರಿಪೋರ್ಟರ್​ಗೆ ಪಿಸ್ತೂಲ್​ ತೋರಿಸಿ ಬೆದರಿಸಿ ಸುಲಿಗೆ; ಲೈವ್​ನಲ್ಲಿದ್ದಾಗಲೇ ನಡೆಯಿತು ಕಿಡಿಗೇಡಿಯ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
