ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸ್​ ವಿಡಿಯೋಗಳ ಮನರಂಜನೆಗೆ ಕೊರತೆಯೇನು ಇಲ್ಲ. ಇದೀಗ ಅದೇ ಸಾಲಿಗೆ ಸೇರಿದ ವಿಡಿಯೋವೊಂದು ಭರಪೂರ ಮನರಂಜನೆಯೊಂದಿಗೆ ವೀಕ್ಷಕರನ್ನು ಗೊಂದಲಕ್ಕೀಡುಮಾಡಿದ್ದು, ಪದೇ ಪದೆ ನೋಡುವಂತೆ ಪ್ರೇರಿಪಿಸುವಂತಿದೆ.
ವಿಡಿಯೋವನ್ನು ಪ್ರಭಾಸಿನಿ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಡ್ಯಾನ್ಸ್​ ವಿಡಿಯೋ ಕೊನೆಯಲ್ಲಿ ಬರುವ ದೃಶ್ಯವನ್ನು ನೆಟ್ಟಿಗರನ್ನು ಪದೇ ಪದೆ ನೋಡುವಷ್ಟು ಗೊಂದಲಕ್ಕೆ ಸಿಲುಕಿಸುತ್ತದೆ.
ವಿಡಿಯೋದಲ್ಲಿ ಏನಿದೆ?:ನಾಲ್ಕು ಯುವಕರ ಗುಂಪೊಂದು ಬಾಲಿವುಡ್​ನ “ಸ್ಟ್ರೀಟ್​ ಡ್ಯಾನ್ಸರ್ 3ಡಿ” ಚಿತ್ರದ ಮುಕಾಬುಲ್ಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರ ಜಟಿಲಯುಕ್ತ ನೃತ್ಯ ಸಂಯೋಜನೆ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ, ವಿಡಿಯೋ ಕೊನೆಯಲ್ಲಿ ನೆಟ್ಟಿಗರು ಒಮ್ಮೆ ತಲೆ ಕೆರೆದುಕೊಳ್ಳುವಂತಹ ಗೊಂದಲ ದೃಶ್ಯವಿದೆ. ಅದೇನೆಂದು ಹೇಳುವುದಕ್ಕಿಂತ ಒಮ್ಮೆ ನೀವೇ ಕೆಳಗಿನ ವಿಡಿಯೋವನ್ನೊಮ್ಮೆ ನೋಡಿ ಬಿಡಿ.
https://twitter.com/cinnabar_dust/status/1229088152473817093?s=20
ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಸೃಷ್ಟಿಸಿರುವ ವಿಡಿಯೋವನ್ನು ಕೇವಲ ಎರಡೇ ದಿನದಲ್ಲಿ 4.72 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. 4700 ರೀಟ್ವೀಟ್​ ಪಡೆದುಕೊಂಡಿರುವ ವಿಡಿಯೋ 16 ಸಾವಿರಕ್ಕಿಂತ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ಕಮೆಂಟ್​ ವಿಭಾಗದಲ್ಲಿ ಅನೇಕ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
