ನವದೆಹಲಿ:ಮನುಷ್ಯ ತನ್ನ ದೇಹದ ಆರೋಗ್ಯವನ್ನು ಉತ್ತಮವಾಗಿಡಲು ವಾಕಿಂಗ್​, ಜಿಮ್​, ಲಾಫಿಂಗ್​ ಕ್ಲಬ್​ ಸೇರಿದಂತೆ ಅನೇಕ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ಅತ್ತರೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿಡಬಹುದು ಎಂಬ ಅಚ್ಚರಿಯ ಸುದ್ದಿಯೊಂದು ಹೊರಬಂದಿದೆ. ಇದು ನಿಮಗೆ ವಿಚಿತ್ರ ಎನಿಸಿದರೂ ಸಂಪೂರ್ಣ ಸತ್ಯ ಎಂದು ಹೇಳಲಾಗುತ್ತಿದೆ.
ಮನುಷ್ಟಯ ತನಗೆ ಎಷ್ಟೇ ನೋವಾದರೂ ತನ್ನ ಆಪ್ರತ ಬಳಿ ದುಃಖವನ್ನು ತೋಡಿಕೊಳ್ಳುತ್ತಾನೆ. ಆದರೆ, ವ್ಯಕ್ತಿಯೊಬ್ಬರು ವಾರಕ್ಕೊಮ್ಮೆ ಅಳಬೇಕು. ಇದು ಆರೋಗ್ಯದ ಗೂನಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅನೇಕ ವಿಜ್ಞಾನಿಗಳು ವಾರಕ್ಕೊಮ್ಮೆ ಅಳುವುದರಿಂದ ಯಾವುದೇ ಹಾನಿಯಾಗುವುದಿಲ್ಲ, ಬದಲಿಗೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸೀರೆಯುಟ್ಟು ಕಾಣಿಸಿಕೊಂಡ ಸ್ಟಾರ್​ ನಟ; ಅರೇ ಏನಾಯ್ತು ಎಂದ ನೆಟ್ಟಿಗರು
ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರcryonceaweek.comಎಂಬ ವೆಬ್​ಸೈಟ್​ಗೆ ಭೇಟಿ ನೀಡಿ ವಾರಕ್ಕೊಮ್ಮೆ ಅಳಬಹುದು ಎಂದು ಹೇಳಲಾಗಿದೆ. ಈ ವೆಬ್‌ಸೈಟ್​ ಜನರನ್ನು ಬರಲು ಮತ್ತು ವೀಡಿಯೊವನ್ನು ವೀಕ್ಷಿಸಲು ಆಹ್ವಾನಿಸುತ್ತದೆ. ಅದು ಖಂಡಿತವಾಗಿಯೂ ಅವರನ್ನು ಅಳುವಂತೆ ಮಾಡುತ್ತದೆ. ಇಲ್ಲಿ ಅಳುವ ಚಲನಚಿತ್ರಗಳನ್ನು ನೋಡುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ನಿದ್ರೆ ಅಥವಾ ನಗುವುದಕ್ಕಿಂತ ಅಳುವುದು ಉತ್ತಮ ಒತ್ತಡ ನಿವಾರಕವಾಗಿದೆ ಎಂದು ಹೇಳಲಾಗಿದೆ. ನೋವಿನ ಹಾಡುಗಳನ್ನು ಕೇಳುವುದು, ದುಃಖದ ಚಲನಚಿತ್ರಗಳನ್ನು ನೋಡುವುದು ಅಥವಾ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು ನಮ್ಮ ದೇಹದ ಪ್ಯಾರಾಸಿಂಪಥೆಟಿಕ್ ನರವನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿದು ಬಂದಿದೆ. ಉತ್ತಮವಾದ ವಿಷಯವೆಂದರೆ ನೀವು ವಾರಕ್ಕೊಮ್ಮೆ ಅಳುತ್ತಿದ್ದರೆ ನೀವು ದೀರ್ಘಾವಧಿಯ ಒತ್ತಡ ಪರಿಹಾರವನ್ನು ಪಡೆಯುತ್ತೀರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nineteen =
Remember me
