ಹೈದರಾಬಾದ್​:ಬರೋಬ್ಬರಿ ಆರು ಸಬ್​ ಇನ್ಸ್​ಪೆಕ್ಟರ್​ಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಡಿಯಲ್ಲಿ ರಾಚಕೊಂಡ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಲತಾ ರೆಡ್ಡಿ ಎಂದು ಗುರುತಿಸಲಾಗಿದೆ. ವೃತ್ತಿಪರ ಟೈಲರ್​ ಆಗಿ ಕೆಲಸ ಮಾಡುವ ಲತಾ ರೆಡ್ಡಿ ವನಸ್ಥಳಿಪುರಂ ನಿವಾಸಿ. ಪತಿಯೊಂದಿಗೆ ಸಂಬಂಧ ಕಡಿದುಕೊಂಡಿರುವ ಆಕೆ ಸುಮಾರು 13 ವರ್ಷಗಳಿಂದ ಆತನಿಂದ ದೂರವಿದ್ದಾಳೆ. ಇದರ ನಡುವೆ ವ್ಯಕ್ತಿಯೊಬ್ಬನ ಜತೆ ವಿವಾಹೇತರ ಸಂಬಂಧವನ್ನು ಹೊಂದಿದ್ದು, ಆತ ಮೊಸ ಮಾಡಿರುವುದಾಗಿ ಕೆಲವು ದಿನಗಳ ಹಿಂದೆ ವನಸ್ಥಳಿಪುರಂ ಪೊಲೀಸ್​ ಠಾಣೆಯಲ್ಲಿ ಲತಾ ರೆಡ್ಡಿ ದೂರು ದಾಖಲಿಸುತ್ತಾಳೆ.
ಇದನ್ನೂ ಓದಿರಿ:ಸರ್​ ದಯವಿಟ್ಟು ಯಾರಾದ್ರೂ ಆಧಾರ್ ಕಾರ್ಡ್ ಮಾಡಿಸಿಕೊಡಿ: ಅಂಗವಿಕಲೆ ಕೂಗಿಗೆ ಅಧಿಕಾರಿಗಳ ದೌಡು!
ಅವಮಾನ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಆಕೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿ ಸ್ವಲ್ಪ ಹಣವನ್ನು ನೀಡಿ, ಕ್ಷಮೆಯಾಚಿಸಿ ರಾಜಿ ಮಾಡಿಕೊಳ್ಳುತ್ತಾನೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಲತಾ ರೆಡ್ಡಿ ಕಣ್ಣು ಸಬ್​ ಇನ್ಸ್​ಪೆಕ್ಟರ್​ಗಳ ಮೇಲೆ ಬೀಳುತ್ತದೆ. ಆಗಾಗ ಠಾಣೆಗೆ ಹೋಗುವ ಆಕೆ ಎಸ್​ಐ ಪರಿಚಯ ಮಾಡಿಕೊಳ್ಳುತ್ತಾಳೆ. ಎಲ್ಲ ವಿಧದಲ್ಲೂ ಅವರೊಂದಿಗೆ ಮುಂದುವರಿಯುತ್ತಾಳೆ. ಬಳಿಕ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಸಿ ಹಣ ಕೀಳುವ ಕೆಲಸಕ್ಕೆ ಇಳಿಯುತ್ತಾಳೆ. ಸುಮಾರು 6 ಸಬ್​ ಇನ್ಸ್​ಪೆಕ್ಟರ್​ಗಳಿಗೆ ಬೆದರಿಕೆ ಹಾಕಿರುತ್ತಾಳೆ. ಸಾಕಷ್ಟು ಹಣವನ್ನು ಕಸಿದಿರುತ್ತಾಳೆ.
ಆದರೆ, ಯಾವೊಬ್ಬ ಎಸ್​ಐ ಸಹ ಲತಾ ರೆಡ್ಡಿ ವಿರುದ್ಧ ದೂರು ನೀಡಿರುವುದಿಲ್ಲ. ಆದರೆ, ಕೊನೆಯಲ್ಲಿ ಎಸ್​ಸಿ ಮತ್ತು ಎಸ್​ಟಿ ದೌರ್ಜನ್ಯ ಕಾಯ್ದೆ ಅಡಿ ವನಸ್ಥಳಿಪುರಂ ಪೊಲೀಸರು ಆಕೆಯನ್ನು ಬಂಧಿಸುತ್ತಾರೆ.(ಏಜೆನ್ಸೀಸ್​)
ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರಿಗೆ ಗುಡ್​ ನ್ಯೂಸ್​! ಎಲ್ಲ ಪ್ರಕರಣಗಳು ವಾಪಾಸ್​!

ರೇಪ್​ ಆರೋಪಿ ಆಟೋ ಚಾಲಕನಿಗೆ ಕ್ಷಮೆಯಾಚಿಸಿದ ಪೊಲೀಸ್​ ಆಯುಕ್ತ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

ಉಡುಪಿಯ ಯುವತಿ ಈಗ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ! ದಾಖಲೆ ಬರೆದ ಕನ್ನಡತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
