ಮುಂಬೈ:ಬಾಲಿವುಡ್​ ನಟ ವಿಕ್ಕಿ ಕೌಶಲ್​ ಇತ್ತೀಚಿನ ವರ್ಷಗಳಲ್ಲಿ ಮುಟ್ಟಿದೆಲ್ಲಾ ಚಿನ್ನ ಎಂಬಂತಾಗಿದೆ. ಅವರ ನಟನೆಯ ಸಿನಿಮಾಗಳು ಹಿಟ್​ಲಿಸ್ಟ್​ ಸೇರುತ್ತಿದ್ದು, ಇದೀಗ ಅವರ ನಟನೆಯ ಬ್ಯಾಡ್​ ನ್ಯೂಸ್​ ಚಿತ್ರದ ತೌಬಾ ತೌಬಾ ಹಾಡು ಸಖತ್​ ಸೌಂಡ್​ ಮಾಡುತ್ತಿದ್ದು, ಹೊಸ ಟ್ರೆಂಡ್​ ಕ್ರಿಯೇಟ್​ ಮಾಡಿದೆ. ಇದೀಗ ಈ ಹಾಡಿಗೆ ಮಕ್ಕಳ ಜೊತೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಡಿಯೋಗೆ ಸ್ವತಃ ವಿಕ್ಕಿ ಕೌಶಲ್​ ಕೂಡ ಕಮೆಂಟ್​ ಮಾಡಿದ್ದಾರೆ.
ರೂಪಾಲಿ ಸಿಂಗ್​ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತೌಬಾ ತೌಬಾ ಹಾಡಿಗೆ ಮಕ್ಕಳ ಜೊತೆ ಮಹಿಳೆ ಸೀರೆಯುಟ್ಟು ಹೆಜ್ಜೆ ಹಾಕುತ್ತಿದ್ದಾರೆ. ಈ ವಿಡಿಯೋ 55 ಮಿಲಿಯನ್​ ವೀವ್​ ಪಡೆದುಕೊಂಡಿದ್ದು, ಮಹಿಳೆಯ ಡ್ಯಾನ್ಸ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 81 ಸಾವಿರ ಫಾಲೋವರ್ಸ್ ಹೊಂದಿರುವ ರೂಪಾಲಿ ಅವರು ಆಗಿಂದಾಗೆ ತಮ್ಮ ಡ್ಯಾನ್ಸ್​ ವಿಡಿಯೋಗಳನ್ನು ಹಾಕುತ್ತಿರುತ್ತಾರೆ.
View this post on InstagramA post shared by Rupali Sing (@sad_rupaa)

A post shared by Rupali Sing (@sad_rupaa)
ಇದನ್ನೂ ಓದಿ:ಸರ್ಕಾರ ವಂಚನೆ ಎಸಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ; ಬಜೆಟ್​ ಖಂಡಿಸಿ ಸಂಸತ್​ ಎದುರು ಪ್ರತಿಭಟನೆ ನಡೆಸಿದ ವಿಪಕ್ಷ ಸಂಸದರು
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನಟ ವಿಕ್ಕಿ ಕೌಶಲ್​, ಹಾಡನ್ನು ಕೊರಿಯೋಗ್ರಾಫಿ ಮಾಡಿದ ಬಾಸ್ಕೋ ಮಾರ್ಟಿಸ್ ಹಾಗೂ ​ತಾಹಿರಾ ಕಶ್ಯಪ್ ಮಹಿಳೆಯ ಡ್ಯಾನ್ಸ್​ ವಿಡಿಯೋಗೆ ಕಮೆಂಟ್​ ಮಾಡಿದ್ದು, ಕ್ಯಾ ಬಾತ್​ ಹೈ ಎಂದು ಹೇಳಿ ಹಾರ್ಟ್​ ಎಮೋಜಿ ಹಾಕಿದ್ದಾರೆ. ಇದಲ್ಲದೆ ಪೊಲೀಸ್​ ಅಧಿಕಾರಿ ಸೇರಿದಂತೆ ಅನೇಕರು ಕಮೆಂಟ್​ ಮಾಡಿ ಮಹಿಳೆಯನ್ನು ಹಾಡಿ ಹೊಗಳಿದ್ದಾರೆ.
ವಿಕ್ಕಿ ಕೌಶಲ್, ತ್ರಿಪ್ತಿ ದಿಮ್ರಿ ನಟನೆಯ ಬ್ಯಾಡ್​ ನ್ಯೂಸ್​ ಚಿತ್ರವು ಜುಲೈ 19ರಂದು ವಿಶ್ವದಾದ್ಯಂತ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಬಾಕ್ಸ್​ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
