ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಭಾನುವಾರ (ಮಾರ್ಚ್​ 8)ರಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸಖತ್​ ಶಾಕ್​ ಕೊಟ್ಟಿದ್ದರು.
ಹೆಚ್ಚೇನೂ ಹೇಳದೆ ಮೂರು ಸಾಲಿನಲ್ಲಿ ಟ್ವೀಟ್ ಮಾಡಿದ್ದರು. ನರೇಂದ್ರ ಮೋದಿಯವರ ಈ ಟ್ವೀಟ್​ಗೆ ಅಪಾರ ಅರ್ಥ ಕಲ್ಪಿಸಿದ ನೆಟ್ಟಿಗರು ಸಾವಿರ ಸಾವಿರ ಪ್ರತಿಕ್ರಿಯೆ ಮಾಡಿದ್ದರು. ಏನಿರಬಹುದು ಇದರ ಅರ್ಥ ಎಂಬುದೇ ದೊಡ್ಡ ಚರ್ಚೆಯಾಗಿ ಹೋಗಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ಸೋಮವಾರ ತಾವು ಮಾಡಿದ ಟ್ವೀಟ್​ ಏನೆಂದು ಹೇಳಿದ್ದಾರೆ. ತಾವ್ಯಾಕೆ ಮಾರ್ಚ್​ 8ರಂದು ತಮ್ಮ ಇನ್ಸ್ಟಾಗ್ರಾಂ, ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಅಕೌಂಟ್​ಗಳನ್ನು ಬಳಸುವುದಿಲ್ಲ ಎಂಬುದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಈ ಮಹಿಳಾ ದಿನಾಚರಣೆಗೆ ನಾನು ನನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಅಕೌಂಟ್​ನ್ನೂ ಸಾಧಕ ಮಹಿಳೆಯರಿಗೆ ಬಿಟ್ಟುಕೊಡುತ್ತಿದ್ದೇನೆ. ತಮ್ಮ ಜೀವನ ಮತ್ತು ಕೆಲಸದ ಮೂಲಕ ಸ್ಫೂರ್ತಿಯಾದ ಮಹಿಳೆಯರಿಗಾಗಿ ನನ್ನ ಸಾಮಾಜಿಕ ಜಾಲತಾಣಗಳನ್ನು ಮೀಸಲಿಡುತ್ತಿದ್ದೇನೆ. ಈ ಮೂಲಕ ದೇಶದ ಕೋಟ್ಯಂತರ ಜನರಿಗೆ ಅವರು ಪ್ರೇರಣೆ ತುಂಬಲು ಸಾಧ್ಯವಾಗುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಾಗೇ #SheInspiresUs ಎಂಬ ಹ್ಯಾಷ್​ಟ್ಯಾಗ್​ನ್ನೂ ಮೋದಿಯವರು ನೀಡಿದ್ದು, ಸಾಧಕ ಮಹಿಳೆಯರು ತಮ್ಮ ಜೀವನದ ಸ್ಫೂರ್ತಿದಾಯಕ ಕತೆಯನ್ನು ಇದೇ ಹ್ಯಾಷ್​ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಹೇಳಿದ್ದಾರೆ. ಸಾಧಕಿಯರ ವಿಡಿಯೋಗಳನ್ನು ಕೂಡ ಮಾಡಿ ಯೂಟ್ಯೂಬ್​​ನಲ್ಲಿ ಹಂಚಿಕೊಳ್ಳಬಹುದು.
ನೀವು ಅಂತಹ ಸಾಧಕ ಮಹಿಳೆಯರಲ್ಲಿ ಒಬ್ಬರಾದರೆ ಅಥವಾ ನಿಮಗೆ ಅಂತಹವರ ಪರಿಚಯವಿದ್ದರೆ ಅದನ್ನು #SheInspiresUs ಹ್ಯಾಷ್​ಟ್ಯಾಗ್​ ಬಳಸಿ ನಮ್ಮೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ. ಹಾಗೇ ಒಂದು ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
#SheInspiresUs ಈ ಹ್ಯಾಷ್​ಟ್ಯಾಗ್​ ಮೂಲಕ ಬಂದಿರುವ ಯಶೋಗಾಥೆಗಳಲ್ಲಿ ಆಯ್ಕೆಯಾದವರಿಗೆ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಬಳಸಲು ಮತ್ತು ಅದೇ ಖಾತೆಗಳ ಮೂಲಕ ಜಗತ್ತಿಗೆ ಅವರ ಚಿಂತನೆಗಳನ್ನು ತಿಳಿಸಲು ಅವಕಾಶ ಒದಗಲಿದೆ.
This Women's Day, I will give away my social media accounts to women whose life & work inspire us. This will help them ignite motivation in millions.
Are you such a woman or do you know such inspiring women? Share such stories using#SheInspiresUs.pic.twitter.com/CnuvmFAKEu
— Narendra Modi (@narendramodi)March 3, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
