ನವದೆಹಲಿ:ಕೋವಿಡ್-19 ಬಿಕ್ಕಟ್ಟಿನಿಂದಾಗಿ ಮೌಲ್ಯ ಕುಸಿತ ಹಾಗೂ ವಸೂಲಾಗದ ಸಾಲದ ಹೊರೆ ಹೆಚ್ಚಾಗುತ್ತಿರುವುದರಿಂದ ಪ್ರಸಕ್ತ ವಿತ್ತ ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು (ಪಿಎಸ್​ಬಿ) ಖಾಸಗೀಕರಿಣ ಮಾಡುವ ಸಂಭವವಿಲ್ಲ.
ಸದ್ಯಕ್ಕೆ ನಾಲ್ಕು ಪಿಎಸ್​ಬಿಗಳು ರಿಸರ್ವ್ ಬ್ಯಾಂಕ್​ನ ಸರಿಪಡಿಸುವ ಕ್ರಿಯೆಯ (ಪಿಸಿಎ) ಸಕ್ರಿಯ ಪರಿಶೀಲನೆಯಲ್ಲಿದೆ. ಈ ನಾಲ್ಕು ಬ್ಯಾಂಕ್​ಗಳ ಮೇಲೆ ಹಲವು ನಿರ್ಬಂಧಗಳನ್ನು ಆರ್​ಬಿಐ ವಿಧಿಸಿದೆ. ಸಾಲ ನೀಡಿಕೆ, ಆಡಳಿತ ಪರಿಹಾರ ಮತ್ತು ನಿರ್ದೇಶಕರ ಶುಲ್ಕ ಈ ನಿರ್ಬಂಧಗಳಲ್ಲಿ ಸೇರಿವೆ. ಆದ್ದರಿಂದ ಪ್ರಸ್ತಾಪಿತ ನಾಲ್ಕು ಬ್ಯಾಂಕ್​ಗಳನ್ನು ಮಾರಾಟ ಮಾಡುವಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಆರ್​ಬಿಐ ಅಭಿಮತವಾಗಿದೆ.
ಇದನ್ನೂ ಓದಿ;ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​
ಇಂಡಿಯನ್ ಓವರ್​ಸೀಸ್ ಬ್ಯಾಂಕ್ (ಐಓಬಿ), ಭಾರತೀಯ ಸೆಂಟ್ರಲ್ ಬ್ಯಾಂಕ್ (ಸಿಬಿಐ), ಯುಕೋ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಆರ್​ಬಿಐನ ಹದ್ದಿನ ಕಣ್ಣಿನಲ್ಲಿರುವ ಸಾರ್ವಜನಿಕ ರಂಗದ ಬ್ಯಾಂಕ್​ಗಳಾಗಿವೆ. ವಿಶೇಷವಾಗಿ ಮಹತ್ವದ ವಲಯದಲ್ಲಿರುವ ತನ್ನ ಸಂಸ್ಥೆಗಳನ್ನು ಹತಾಶೆಯಿಂದ ಮಾರುವುದರಿಂದ ಸರ್ಕಾರ ದೂರವುಳಿಯಲಿದೆ ಎಂದು ಮೂಲಗಳು ಹೇಳಿವೆ.
ಕೋವಿಡ್-19 ಸಾಂಕ್ರಾಮಿಕತೆಯಿಂದಾಗಿ ಪಿಎಸ್​ಬಿಗಳನ್ನು ಸುಧಾರಿಸುವ ಕಾರ್ಯವೇ ಸ್ಥಗಿತಗೊಂಡಿದೆ. ಅಷ್ಟು ಮಾತ್ರವಲ್ಲದೆ ಖಾಸಗಿ ವಲಯದ ಬ್ಯಾಂಕ್​ಗಳ ಆರ್ಥಿಕ ಪರಿಸ್ಥಿತಿ ಮೇಲೆ ಕರೊನಾ ವ್ಯಾಧಿ ಸನ್ನಿವೇಶ ಪ್ರತಿಕೂಲ ಪರಿಣಾಮ ಬೀರುತ್ತಿದೆಯೆನ್ನುವುದು ಗಮನಾರ್ಹ ಸಂಗತಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
