ತೆಲಂಗಾಣ:ಇದು ಮ್ಯಾಚಿಂಗ್​ ಸೀರೆ ಅಲ್ಲದಿರಬಹುದು, ಆದರೆ ಮ್ಯಾಚ್​ಬಾಕ್ಸ್ ಸೀರೆಯಂತೂ ಹೌದು. ಮಾತ್ರವಲ್ಲ, ಇದು ಹಾಟೆಸ್ಟ್​ ಸೀರೆ ಎಂದರೂ ತಪ್ಪೇನಲ್ಲ. ಏಕೆಂದರೆ ಇಡೀ ಸೀರೆಯನ್ನು ಒಂದು ಬೆಂಕಿಪೊಟ್ಟಣದ ಒಳಗಿಟ್ಟುಕೊಂಡು ಒಯ್ಯಬಹುದು.
ನಲ್ಲ ವಿಜಯ್ ಎಂಬವರು ಇಂಥದ್ದೊಂದು ವಿಶಿಷ್ಟ ಸೀರೆಯನ್ನು ಕೈಮಗ್ಗದ ಮೂಲಕ ನೇಯ್ದಿದ್ದಾರೆ. ಒಂದು ಬೆಂಕಿಪೊಟ್ಟಣದ ಒಳಗಿಟ್ಟು ಒಯ್ಯಬಹುದಾದ ಈ ಸೀರೆಯನ್ನು ತೆಲಂಗಾಣದ ಸಚಿವರಾದ ಕೆ.ಟಿ. ರಾಮರಾವ್, ಎರ್ರಬೆಲ್ಲಿ ದಯಾಕರ್ ರಾವ್, ವಿ.ಶ್ರೀನಿವಾಸ್ ಗೌಡ್ ಮತ್ತು ಸಬಿತಾ ರೆಡ್ಡಿ ಮುಂತಾದವರ ಸಮ್ಮುಖದಲ್ಲಿ ಇಲ್ಲಿನ ಸಿರಿಸಿಲ್ಲದ ಯುವನೇತಾರರಾಗಿರುವ ನಲ್ಲ ವಿಜಯ್ ಅನಾವರಣಗೊಳಿಸಿದರು.
ನಲ್ಲ ವಿಜಯ್ ಈ ಸೀರೆಯನ್ನು ಬರೀ ಆರು ದಿನಗಳಲ್ಲಿ ನೇಯ್ಗೆ ಮಾಡಿದ್ದು, ಇದಕ್ಕೆ ಸಾಂಪ್ರದಾಯಿಕ ಮಗ್ಗದಲ್ಲಿ 12 ಸಾವಿರ ರೂಪಾಯಿ ಖರ್ಚು ತಗುಲಿದೆ. ಇದನ್ನೇ ಯಾಂತ್ರಿಕ ಮಗ್ಗದಲ್ಲಿ ಮಾಡಿದರೆ 8 ಸಾವಿರ ರೂ. ಖರ್ಚಿನಲ್ಲಿ ಮಾಡಬಹುದು ಎಂದು ಅವರು ವಿವರಣೆ ನೀಡಿದರು. ಈ ವಿಶಿಷ್ಟ ಸೀರೆಯನ್ನು ನೇಯ್ಗೆ ಮಾಡಿರುವವರಿಗೆ ಸಚಿವರು ಮೆಚ್ಚುಗೆ ಸೂಚಿಸಿದರು.

ಒಂದು ವರ್ಷದ ಮಗುವಿಗೆ ವಿಷ ಉಣಿಸಿ ಅಪ್ಪ-ಅಮ್ಮ ಆತ್ಮಹತ್ಯೆ; ‘ಮೂವರನ್ನೂ ಒಟ್ಟಿಗೇ ಮಣ್ಣು ಮಾಡಿ, ಖುಷಿಯಿಂದ ಕಳಿಸಿಕೊಡಿ..’

ಹಿನ್ನಡೆಯಲ್ಲಿದ್ದ ಕಾಫಿ ಡೇಗೆ ಮುನ್ನಡೆ; ಕಂಪನಿಯ ಸಾಲದ ಹೊರೆ ತಗ್ಗಿಸಿದರು ಸಿದ್ಧಾರ್ಥರ ಪತ್ನಿ ಮಾಳವಿಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + ten =
Remember me
