ನವದೆಹಲಿ:ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ YouTube ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಎಲ್ಲರೂ YouTube ಅನ್ನು ಬಳಸುತ್ತಾರೆ. ಜಗತ್ತಿನ ಎಲ್ಲ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಯೂಟ್ಯೂಬ್‌ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಸಣ್ಣ ವಿಷಯಗಳಿಂದ ಹಿಡಿದು ಬಾಹ್ಯಾಕಾಶದವರೆಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳಿಗೆ ‘ಯೂಟ್ಯೂಬ್’ ಗೋ-ಟು ಸ್ಥಳವಾಗಿದೆ ಎಂಬುದು ಗಮನಾರ್ಹವಾಗಿದೆ.
ಇದಿಷ್ಟೇ ಅಲ್ಲದೆ, ಅನೇಕ ಕ್ರಿಯೆಟರ್ಸ್​ಗಳು ತಮ್ಮ ಸೃಜನಶೀಲತೆಯೊಂದಿಗೆ ಉತ್ತಮ ಆದಾಯವನ್ನು ಗಳಿಸಲು YouTube ಅನ್ನು ವೇದಿಕೆಯಾಗಿ ಬಳಸುತ್ತಿದ್ದಾರೆ. ಅದಕ್ಕಾಗಿಯೇ ಯೂಟ್ಯೂಬ್‌ನಲ್ಲಿ ಕೋಟಿಗಟ್ಟಲೆ ವಿಡಿಯೋಗಳು ಕಾಣಸಿಗುತ್ತವೆ. ಅನೇಕರಿಗೆ ಉದ್ಯೋಗವನ್ನು ನೀಡಿದ್ದು, ಜೀವನಕ್ಕೆ ದಾರಿಯನ್ನು ಮಾಡಿಕೊಡುತ್ತಿದೆ.
ಮಲಯಾಳಂನಲ್ಲಿ ಯೂಟ್ಯೂಬ್ ಚಾನೆಲ್‌ಗಳಲ್ಲಿ ಫ್ಯಾಮಿಲಿ ವ್ಲಾಗ್‌ಗಳು ಇತ್ತೀಚೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿವೆ. ಮನೆಯಲ್ಲಿನ ದೈನಂದಿನ ವಿಚಾರಗಳಿಂದ ಹಿಡಿದು ವೈಯಕ್ತಿಕ ವಿವರಗಳನ್ನು ವಿಡಿಯೋ ಮೂಲಕ ತಿಳಿಸಲಾಗುತ್ತಿದೆ. ಇಲ್ಲಿ ಹಾಸ್ಯ, ಭಾವುಕತೆ ಮತ್ತು ಪ್ರೀತಿ ಎಲ್ಲವನ್ನು ಒಳಗೊಂಡಿರುತ್ತದೆ. ಅಂತಹ ಚಾನೆಲ್​ಗಳಲ್ಲಿ “ಕೆಎಲ್ ಬ್ರೋ ಬಿಜು ರಿತ್ವಿಕ್” ಯೂಟ್ಯೂಬ್ ಚಾನೆಲ್ ಕೂಡ ಒಂದು.
ಕಣ್ಣೂರಿನ ಕೆಎಲ್ ಬ್ರೋ ಬಿಜು ರಿತ್ವಿಕ್ ಚಾನೆಲ್​ ಸಬ್​ಸ್ಕ್ರೈಬರ್ ವಿಚಾರದಲ್ಲಿ ಕೇರಳದ ನಂಬರ್ ಒನ್ ಚಾನೆಲ್ ಆಗಿದೆ. ಬಿಜು ಮತ್ತು ಅವರ ಕುಟುಂಬವು ಐವತ್ತು ಮಿಲಿಯನ್ ಅಥವಾ ಐದು ಕೋಟಿಗೂ ಅಧಿಕ ಸಬ್​ಸ್ಕ್ರೈಬರ್ ಹೊಂದಿದೆ. ಹೀಗಾಗಿ ಕಸ್ಟಮೈಸ್ ಮಾಡಿದ ರೂಬಿ ಕ್ರಿಯೆಟರ್​ ಪ್ಲೇ ಬಟನ್ ಅನ್ನು ಕುಟುಂಬ ಸ್ವೀಕರಿಸಿದೆ. ಈ ಪ್ಲೇಬಟನ್​ ಪಡೆದ ಕೇರಳದ ಮೊದಲ ಚಾನೆಲ್​ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈಗಾಗಲೇ ಸಿಲ್ವರ್ ಪ್ಲೇ ಬಟನ್, ಗೋಲ್ಡನ್ ಬಟನ್ ಮತ್ತು ಡೈಮಂಡ್ ಬಟನ್ ಅನ್ನು ಗೆದ್ದಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಯೂಟ್ಯೂಬ್ ಸಿಇಒ ಅವರು ಪ್ಲೇ ಬಟನ್ ನೀಡಿದ್ದಾರೆ.
50 ಮಿಲಿಯನ್ ಸಬ್​ಸ್ಕ್ರೈಬರ್ಸ್​ ಹೊಂದಿದವರಿಗೆ ವಿಶೇಷವಾಗಿ ಕಸ್ಟಮೈಸ್ ಮಾಡಿದ ಸುಂದರವಾದ ರೂಬಿ ಕ್ರಿಯೇಟರ್​ ಪ್ಲೇ ಬಟನ್ ಅನ್ನು ಯೂಟ್ಯೂಬ್​ ನೀಡುತ್ತದೆ. ಇದು ಎರಡನೇ ಅತ್ಯಂತ ಪ್ರತಿಷ್ಠಿತ YouTube ಪ್ಲೇ ಬಟನ್ ಆಗಿದೆ. ಐವತ್ತು ಮಿಲಿಯನ್ ಸಬ್​ಸ್ಕ್ರೈಬರ್ಸ್​​ ಹೊಂದಿರುವ ಯೂಟ್ಯೂಬ್ ಚಾನೆಲ್‌ಗಳು ಪ್ರತಿ ವಿಡಿಯೋಗೆ ಸರಾಸರಿ ಒಂದು ಮಿಲಿಯನ್ ವೀಕ್ಷಣೆಗಳನ್ನು ಹೊಂದಿವೆ ಎಂದು ವರದಿಗಳು ಸೂಚಿಸುತ್ತವೆ. ಪ್ರತಿ ವಿಡಿಯೋಗೆ 40,000 ರಿಂದ 4 ಲಕ್ಷ ರೂ.ವರೆಗೂ ಗಳಿಸುತ್ತವೆ.
YouTube ಚಾನಲ್‌ಗಳಿಗೆ ಸಬ್​ಸ್ಕ್ರೈಬರ್ಸ್ ಆಧಾರದ ಮೇಲೆ ಒಟ್ಟು ಐದು ಪ್ಲೇ ಬಟನ್‌ಗಳನ್ನು ನೀಡಲಾಗುತ್ತದೆ. 100,000 ಚಂದಾದಾರರಿಗೆ ಸಿಲ್ವರ್ ಬಟನ್, ಒಂದು ಮಿಲಿಯನ್ ಚಂದಾದಾರರಿಗೆ ಗೋಲ್ಡನ್ ಬಟನ್, ಹತ್ತು ಮಿಲಿಯನ್ ಚಂದಾದಾರರಿಗೆ ಡೈಮಂಡ್ ಪ್ಲೇ ಬಟನ್ ಹಾಗೂ 50 ಮಿಲಿಯನ್​ ಚಂದಾದಾರರಿಗೆ ಕಸ್ಟಮ್ ಕ್ರಿಯೇಟರ್ ಪ್ರಶಸ್ತಿ ಅಥವಾ ರೂಬಿ ಕ್ರಿಯೇಟರ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ನೂರು ಮಿಲಿಯನ್ ಚಂದಾದಾರರಿಗೆ ರೆಡ್ ಡೈಮಂಡ್ ಕ್ರಿಯೇಟರ್ ಪ್ರಶಸ್ತಿ ಕೊಡಲಾಗುತ್ತದೆ.
ಅಂದಹಾಗೆ ಬಿಜು ಋತ್ವಿಕ್ ಫ್ಯಾಮಿಲಿ ಯೂಟ್ಯೂಬ್​ ಚಾನೆಲ್ ಹಿಂದೆ ಖಾಸಗಿ ಬಸ್ ಚಾಲಕ ಬಿಜು ಕುಟುಂಬವಿದೆ. ಈ ಕುಟುಂಬ ಕಣ್ಣೂರು ಜಿಲ್ಲೆಯ ಕುಟ್ಟಿಯತ್ತೂರು ಗ್ರಾಮ ಪಂಚಾಯಿತಿಯ ಪವನ್ನೂರುಮೊಟ್ಟದಲ್ಲಿ ವಾಸವಿದೆ. ಬಿಜು ಪತ್ನಿ ಕವಿ ಕರ್ನಾಟಕದವರು. ಬಿಜು ಅವರ ಪತ್ನಿ, ತಾಯಿ ಮತ್ತು ಮಗ ಚಾನೆಲ್‌ನಲ್ಲಿ ಮುಖ್ಯ ಪಾತ್ರಗಳು. ಕಣ್ಣೂರು ಭಾಷೆಯಲ್ಲಿ ಸರಳ ಜೀವನವನ್ನು ಬಿಂಬಿಸುವ ಮೂಲಕ ಗಮನ ಸೆಳೆದಿದ್ದಾರೆ.(ಏಜೆನ್ಸೀಸ್​)
ಮಾಜಿ ಪತಿ ನಾಗಚೈತನ್ಯ ಜತೆ ಶೋಭಿತಾ ನಿಶ್ಚಿತಾರ್ಥ: ಕೊನೆಗೂ ಮೌನ ಮುರಿದ ಸಮಂತಾ!

ದೇಶಿ ಕ್ರಿಕೆಟ್​ನಲ್ಲೂ ಸಿಗದ ಸ್ಥಾನ! ಅಂತ್ಯವಾಯ್ತು ಟೀಮ್​ ಇಂಡಿಯಾ ಸ್ಟಾರ್​ ಆಟಗಾರನ ವೃತ್ತಿ ಬದುಕು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + four =
Remember me
