ಚೆನ್ನೈ:ಪೊಲೀಸ್​ ಕಾನ್ಸ್​ಟೆಬಲ್​ ಒಬ್ಬರು ಯುವತಿಯ ಜತೆ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿರುವ ವಿವಾದಾತ್ಮಕ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.
ವಿಡಿಯೋದಲ್ಲಿರುವ ಇರುವ ಕಾನ್ಸ್​ಟೆಬಲ್​ ವಿಲತ್ತಿಕುಲಂ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದಾರೆ. ಕಾನ್ಸ್​ಟೆಬಲ್​ ಹೆಸರು ರಾಜೇಂದ್ರನ್​. ಇವರು ಯುವತಿಯೊಬ್ಬಳ ಜತೆ ಅರಣ್ಯದ ಒಳಗಡೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇದು ಸಾರ್ವಜನಿಕರಲ್ಲಿ ಮತ್ತು ಪೊಲೀಸ್ ಇಲಾಖೆಯೊಳಗೆ ವ್ಯಾಪಕವಾದ ಊಹಾಪೋಹ ಮತ್ತು ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಮೇಲೆಯೂ ಪೇದೆ ಹಲ್ಲೆ ಮಾಡಿರುವುದು ಸಹ ವಿಡಿಯೋದಲ್ಲಿದೆ.
ಇದನ್ನೂ ಓದಿ:ಮದ್ವೆ ಸೇರಿ ಇತರೆ ಉತ್ಸವಗಳಲ್ಲಿ ಸಿನಿಮಾ ಹಾಡಿನ ಬಳಕೆ ಕಾಪಿರೈಟ್​ ಉಲ್ಲಂಘನೆ ಆಗುವುದಿಲ್ಲ: ಕೇಂದ್ರ ಸ್ಪಷ್ಟನೆ
ಪೇದೆ ರಾಜೇಂದ್ರನ್​, ತೂತುಕುಡಿ ಜಿಲ್ಲೆಯ ವಿಲತ್ತಿಕುಲಂ ಬಳಿಯ ಕೆ. ಸುಂದರೇಶ್ವರಪುರಂ ಗ್ರಾಮದ ನಿವಾಸಿ. 2009ರಲ್ಲಿ ಪೊಲೀಸ್​ ಸೇವೆಗೆ ಸೇರಿದರು. ಹಲವು ರೀತಿಯ ಜವಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದೀಗ ಅವರ ವಿಡಿಯೋ ಫೇಸ್​ಬುಕ್​, ವಾಟ್ಸ್​ಆ್ಯಪ್​ನಂತಹ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ವಿಡಿಯೋದಲ್ಲಿ ಪೇದೆ ರಾಜೇಂದ್ರನ್​ ಟೀ-ಶರ್ಟ್​ ಮತ್ತು ಲುಂಗಿ ಧರಿಸಿದ್ದಾರೆ ಮತ್ತು ಜತೆಗಿರುವ ಯುವತಿ ಚೂಡಿದಾರ್​ ಧರಿಸಿದ್ದು, ಮುಖ ಕಾಣದಂತೆ ದುಪ್ಪಟ್ಟದಿಂದ ಮುಚ್ಚಿಕೊಂಡಿದ್ದಾರೆ. ಯಾರೋ ನಮ್ಮನ್ನು ವಿಡಿಯೋ ರೆಕಾರ್ಡ್​ ಮಾಡುತ್ತಿದ್ದಾರೆ ಎಂದು ಗೊತ್ತಾದ ಬಳಿಕ ಇಬ್ಬರು ಭಯಭೀತರಾಗಿರುವಂತೆ ಕಾಣುತ್ತದೆ. ಅಲ್ಲದೆ, ಪೇದೆ ರಾಜೇಂದ್ರನ್​ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಕೂಡ ರೆಕಾರ್ಡ್​ ಆಗಿದೆ.
ವಿಡಿಯೋ ಬಹಿರಂಗವಾಗಿರುವುದು ವಿಲತ್ತಿಕುಲಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೂರುಗಳು ಮತ್ತು ಅದರ ಶಿಸ್ತು ಕ್ರಮಗಳ ಬಗ್ಗೆ ಕಳವಳ ವ್ಯಕ್ತವಾಗಲಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ, ಇದೇ ರೀತಿಯ ಆರೋಪಗಳಿಂದಾಗಿ ಮೂವರು ಸಹಾಯಕ ನಿರೀಕ್ಷಕರು ಮತ್ತು ಒಬ್ಬ ಇನ್ಸ್‌ಪೆಕ್ಟರ್​ರನ್ನು ಸಶಸ್ತ್ರ ಪಡೆಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಉಡುಪಿಯ ಟಾಯ್ಲೆಟ್​ ಪ್ರಕರಣದ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ ಹೇಳಿದ್ದೇನು? ಎತ್ತ ಸಾಗುತ್ತಿದೆ ವಿವಾದ?
ವಿಡಿಯೋ ವೈರಲ್​ ಆಗಿದ್ದು, ಪೊಲೀಸ್ ಇಲಾಖೆಯಲ್ಲಿನ ಸುರಕ್ಷತಾ ಮತ್ತು ನೈತಿಕ ಮಾನದಂಡಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ ಮತ್ತು ಕಾನ್ಸ್​ಟೆಬಲ್‌ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಪೊಲೀಸ್ ಇಲಾಖೆಯು, ರಾಜೇಂದ್ರನ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಈ ವಿಷಯದ ಬಗ್ಗೆ ರಾಜೇಂದ್ರನ್ ಮತ್ತು ವಿಡಿಯೋದಲ್ಲಿರುವ ಯುವತಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)

​VIDEO| ಮೆಲ್ಛಾವಣಿ ಕಿತ್ತರೂ ರಸ್ತೆಗಿಳಿದ ಬಸ್​​ನ ಸ್ಥಿತಿ ಕಂಡು ದಂಗಾದ ನೆಟ್ಟಿಗರು

ವಿದ್ಯುತ್ ಅವಘಡದಿಂದ ಕೊಟ್ಟಿಗೆಯಲ್ಲಿದ್ದ 7 ಆಕಳುಗಳು ಸಜೀವ ದಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 12 =
Remember me
