ನವದೆಹಲಿ:ಇಂದು ತಮಗೆ ಸೂಕ್ತವಾದ ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಅಪ್ಲಿಕೇಶನ್‌ಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಈ ಆಧುನಿಕ ಜಗತ್ತಿನಲ್ಲಿ ಇದು ಹೊಸದೇನಲ್ಲವಾದರೂ ಈ ಕ್ಷೇತ್ರದಲ್ಲೂ ಸಾಕಷ್ಟು ಸಮಸ್ಯೆಗಳಿರುವುದು ಸುಳ್ಳಲ್ಲ. ಈ ಆ್ಯಪ್‌ಗಳಲ್ಲಿ ಸ್ನೇಹದ ಮುಖವಾಡದ ಹಿಂದಿರುವ ಅಪಾಯಗಳು ನಿಮ್ಮ ಜೀವನವನ್ನೇ ಸರ್ವನಾಶಮಾಡುತ್ತವೆ. ಇಂತಹ ಅನೇಕ ಕತೆಗಳು ಮತ್ತು ಘಟನೆಗಳನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಹೀಗಾಗಿ ಇವುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.
ಮೊದಲ ಅಪಾಯವೆಂದರೆ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಯಾರಾದರೂ ಸುಲಭವಾಗಿ ನಕಲಿ ಪ್ರೊಫೈಲ್ ಅನ್ನು ರಚಿಸಬಹುದು. ಈ ಮೂಲಕ ಒಬ್ಬರ ಸ್ವಂತ ವ್ಯಕ್ತಿತ್ವ ಮತ್ತು ಸುತ್ತಮುತ್ತಲಿನ ಪರಿಸರವನ್ನು ದಾರಿತಪ್ಪಿಸುವ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದ್ದರಿಂದ, ನೀವು ವಿವಿಧ ಹಗರಣಗಳಿಗೆ ಬಲಿಯಾಗಬಹುದು. ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಹೆಸರು, ಫೋಟೋ ಮತ್ತು ಸ್ಥಳದಂತಹ ಮಾಹಿತಿಯನ್ನು ನೀವು ಹಂಚಿಕೊಳ್ಳಬೇಕಾಗುತ್ತದೆ. ಇದು ಕೂಡ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ನಾವು ಹಂಚಿಕೊಳ್ಳುವ ಮಾಹಿತಿಯು ಸುರಕ್ಷಿತವಲ್ಲ ಎಂಬುದೇ ಇಲ್ಲಿನ ಮುಖ್ಯ ಸವಾಲು. ಆಘಾತಕಾರಿ ಸಂಗತಿ ಏನೆಂದರೆ, ಇಲ್ಲಿ ಮಾಹಿತಿಯು ಹ್ಯಾಕರ್‌ಗಳ ಕೈಗೆ ಸುಲಭವಾಗಿ ಸಿಗುವ ಸಾಧ್ಯತೆಯಿದೆ. ಡೇಟಿಂಗ್ ಆ್ಯಪ್‌ಗಳ ಮೂಲಕ ಪಡೆದ ನಮ್ಮ ವೈಯಕ್ತಿಕ ಮಾಹಿತಿಯನ್ನು ಕಂಪನಿಗಳು ಬಳಸಬಹುದು ಮತ್ತು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಬಹುದು ಎಂಬುದನ್ನು ಮರೆಯಬೇಡಿ. ಅದೇ ರೀತಿ ಈ ಡೇಟಿಂಗ್​ ಆ್ಯಪ್‌ಗಳಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡ ನಂತರ ಸುಲಭವಾಗಿ ನಂಬುವುದು ಕೂಡ ಒಳ್ಳೆಯದಲ್ಲ. ಏಕೆಂದರೆ, ಒಬ್ಬ ವ್ಯಕ್ತಿ ನಿಜ ಜೀವನದಲ್ಲಿ ಹೇಗಿರುತ್ತಾನೆ ಎಂಬುದನ್ನು ಮರೆಮಾಚುವ ಸಾಧ್ಯತೆ ದಟ್ಟವಾಗಿರುತ್ತದೆ.
ಇತ್ತೀಚೆಗೆ ಇಂತಹ ಆ್ಯಪ್​ಗಳ ಮೂಲಕ ಮದುವೆ ವಂಚನೆ ಹಾಗೂ ಹಣ ಸುಲಿಗೆಯಂತಹ ಅಪರಾಧಗಳು ಸಾಮಾನ್ಯ ಸಂಗತಿಯಾಗಿವೆ. ಅದೇ ರೀತಿ ದೈಹಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚಿದೆ. ಮತ್ತೊಂದು ಅಪಾಯವೆಂದರೆ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವಾಗ ಕೆಲ ಪ್ರಕರಣಗಳಲ್ಲಿ ಸೆಕ್ಸ್ ರಾಕೆಟ್‌ಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಉದಾಹರಣೆಗಳು ಇವೆ. ಹೀಗಾಗಿ ಈ ಡೇಟಿಂಗ್​ ಆ್ಯಪ್​ ಬಳಸುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ. ಇಲ್ಲಿ ಹಣ ಮಾತ್ರವಲ್ಲ ಜೀವನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ.(ಏಜೆನ್ಸೀಸ್​)
ಭಾರತ-ಲಂಕಾ ನಡುವಿನ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ? ಇಲ್ಲಿದೆ ಕಾರಣ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:16 − five =
Remember me
