ಅಹಮದಾಬಾದ್​:ಮಾಸ್ಕ್ ಧರಿಸುವುದಕ್ಕೆ ನಿರಾಕರಿಸುವವರನ್ನು ಯಾವುದೇ ಕೋವಿಡ್ ಕೇರ್ ಸೆಂಟರ್​ಗಳಿಗೆ ಕರೆದೊಯ್ದು ಸಮುದಾಯ ಸೇವೆ ಮಾಡಿಸಿ !ಹೀಗೊಂದು ಆದೇಶವನ್ನು ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನೀಡಿದೆ. ಈ ಸಂಬಂಧ ನಿಯಮ ರೂಪಿಸುವಂತೆ ನಿರ್ದೇಶಿಸಿರುವ ಕೋರ್ಟ್​, ಸಂಕಷ್ಟ ಕಾಲದಲ್ಲಿದ್ದರೂ ನಿಯಮ ಉಲ್ಲಂಘಿಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಕೋರ್ಟ್ ಆದೇಶ ಪ್ರಕಾರ, ಮಾಸ್ಕ್ ಧರಿಸದವರಿಗೆ, ಕೋವಿಡ್ ನಿಯಮ ಉಲ್ಲಂಘಕರಿಗೆ ದಂಡ ವಿಧಿಸುವುದರ ಜತೆಗೆ ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಕನಿಷ್ಠ 4 ರಿಂದ 5 ಗಂಟೆ ಅವಧಿಗೆ ಕನಿಷ್ಠ 5 ರಿಂದ ಗರಿಷ್ಠ 15 ದಿನಗಳ ಕಾಲ ಸಮುದಾಯ ಸೇವೆ ಮಾಡುವಂತೆ ಸೂಚಿಸಬೇಕು.
ಇದನ್ನೂ ಓದಿ:ಕರೊನಾ ವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಸಿಎಂ ಚಾಲನೆ
ನಿಯಮ ಉಲ್ಲಂಘಕರಿಗೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಸ್ವಚ್ಛತಾ ಕಾರ್ಯ, ಹೌಸ್​ಕೀಪಿಂಗ್​, ಅಡುಗೆ, ನೆರವು, ಸೋಂಕುಪೀಡಿತರ ಸೇವೆ, ರೆಕಾರ್ಡ್, ಡೇಟಾ ಸಂಗ್ರಹ ಮುಂತಾದ ಕೆಲಸಗಳನ್ನು ಕೊಡಬೇಕು. ಈ ಸಂಬಂಧ ಸರ್ಕಾರ ಸಿದ್ಧತೆ ಮಾಡಿಕೊಂಡು ಡಿಸೆಂಬರ್ 24ರೊಳಗೆ ವರದಿ ಸಲ್ಲಿಸಬೇಕು. ವಿಶಾಲ್ ಅವ್ತಾನಿ ಹೂಡಿದ್ದ ದಾವೆ ಸಂಬಂಧ ಕೋರ್ಟ್ ಈ ಆದೇಶ ನೀಡಿದೆ. (ಏಜೆನ್ಸೀಸ್)
ಕರೊನಾ ವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಮುಖ್ಯಮಂತ್ರಿ ಬಿ.ಎಸ್.ವೈ ಚಾಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
