ಲಖನೌ:ಹಾಲಿವುಡ್​ ಚಿತ್ರಗಳಲ್ಲಿ ಕಂಡುಬರುವ ಐರನ್​ ಮ್ಯಾನ್​ನಂತಹ ಕಾಲ್ಪನಿಕ ಪಾತ್ರದ ಆಕಾರವುಳ್ಳ ಬಲೂನ್​ ಒಂದು ಆಕಾಶದಲ್ಲಿ ಹಾರಾಡುವ ಮೂಲಕ ಜನರನ್ನು ಭಯಭೀತಗೊಳಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್​ ನೊಯ್ಡಾ ಜಿಲ್ಲೆಯ ಡಂಕೌರ್​ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಗ್ಯಾಸ್​ನಿಂದ ತುಂಬಿದ್ದ ಬಲೂನ್​ ಐರನ್​ ಮ್ಯಾನ್​ ಆಕಾರದಲ್ಲಿತ್ತು. ಶನಿವಾರ ಬೆಳಗ್ಗೆಯೇ ಡಂಕೌರ್​ ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಬಳಿಕ ಬಲೂನ್​ ಭಟ್ಟ ಪರ್ಸುಲಾ ಗ್ರಾಮದಲ್ಲಿರುವ ಕಾಲುವೆಯಲ್ಲಿ ಲ್ಯಾಂಡ್​ ಆಗಿತ್ತು. ಅದನ್ನು ನೋಡಲು ಅನೇಕ ಮಂದಿ ಕಾಲವೆ ಬಳಿ ಜಮಾಯಿಸಿದ್ದರು. ಬಹುತೇಕರು ಬಲೂನ್​ ಅನ್ನು ತಪ್ಪಾಗಿ ಅರ್ಥೈಸಿಕೊಂಡು ಅದೊಂದು ಏಲಿಯನ್​ ಇರಬೇಕೆಂದು ಹತ್ತಿರ ಹೋಗಲು ಹಿಂಜರಿಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ದಲಿತರ ಬೀದಿಗೆ ದೇವರು ಬರಲಿ ಎಂದಿದ್ದಕ್ಕೆ 50 ಸಾವಿರ ರೂ. ದಂಡ!
ಗ್ಯಾಸ್​ನಿಂದ ಗಾಳಿಯಲ್ಲಿ ಹಾರಾಡಿದ್ದ ಬಲೂನ್​ ಗ್ಯಾಸ್​ ಖಾಲಿಯಾಗುತ್ತಿದ್ದಂತೆ ಕಾಲುವೆ ಬಿದ್ದು, ಅಲ್ಲಿ ಬೆಳೆದಿದ್ದ ಪೊದೆಗಳು ನಡುವೆ ಸಿಲುಕಿತ್ತು. ಹರಿಯುವ ನೀರು ಬಲೂನ್​ನ ಒಂದು ಭಾಗವನ್ನು ಸ್ಪರ್ಶಿಸುತ್ತಿದ್ದರಿಂದ ಅದು ಅಲುಗಾಡುತ್ತಿತ್ತು. ಹೀಗಾಗಿ ಜನರು ಏಲಿಯನ್​ ಅಂದುಕೊಂಡು ಕಲ್ಪಿಸಿಕೊಂಡು ಹತ್ತಿರ ಹೋಗಲು ಹೆದರುತ್ತಿದ್ದರು ಎಂದು ಡಂಕೌರ್​ ಪಟ್ಟಣದ ಪೊಲೀಸ್​ ಅಧಿಕಾರಿ ಅನಿಲ್​ ಕುಮಾರ್​ ಪಾಂಡೆ ಹೇಳಿದ್ದಾರೆ.
ಪತ್ತೆಯಾದ ಬಲೂನ್​ ವಸ್ತುವಿನಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇರಲಿಲ್ಲ. ಆದರೆ ಅದನ್ನು ಗಾಳಿಯಲ್ಲಿ ಹಾರಿ ಬಿಟ್ಟವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು.(ಏಜೆನ್ಸೀಸ್​)
ಒಂದೂವರೆ ವರ್ಷದ ಬಳಿಕ ಕೋಮಾದಿಂದೆದ್ದು ಇಬ್ಬರ ಜೈಲಿಗಟ್ಟಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
