ನಕಲಿ ನೋಟುಗಳನ್ನು ಎಲ್ಲೇ ಆಗಲಿ ಚಲಾವಣೆ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಬ್ಯಾಂಕ್​ಗೆ ಕೊಡುವುದಂತೂ ತುಂಬಾ ಕಷ್ಟ. ಹೀಗಿರುವಾಗ 1 ಕೋಟಿ ರೂ. ಮೊತ್ತದ ನಕಲಿ ನೋಟುಗಳು ಬ್ಯಾಂಕ್​ಗಳಿಗೆ ಜಮೆಯಾಗಿ ಅಲ್ಲಿಂದ ರಿಸರ್ವ್​ ಬ್ಯಾಂಕ್​ಗೂ ಜಮೆ ಆಗಿವೆ ಎಂದರೆ ಅಚ್ಚರಿಯೇ ಸರಿ..!
ರಿಸರ್ವ್​ ಬ್ಯಾಂಕ್​ಗೆ ಜಮೆ ಆಗಿರುವ ಹಣದಲ್ಲಿ 500 ರೂ. ಮುಖಬೆಲೆಯ 9,753 ನಕಲಿ ನೋಟುಗಳು, 1 ಸಾವಿರ ರೂ. ಮುಖಬೆಲೆಯ 5,783 ನಕಲಿ ನೋಟುಗಳು ಸೇರಿ 1. 05 ಕೋಟಿ ರೂ. ಮೊತ್ತದ ನಕಲಿ ನೋಟುಗಳು ಪತ್ತೆಯಾಗಿವೆ.
ಈ ಬಗ್ಗೆ ಲಕ್ನೌದಲ್ಲಿನ ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾದ ಅಸಿಸ್ಟೆಂಟ್ ಮ್ಯಾನೇಜರ್​ ರಂಜನಾ ಮರವಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಈ 15,436 ನಕಲಿ ನೋಟುಗಳು 2017ರ ಅಕ್ಟೋಬರ್​ನಿಂದ 2018ರ ಮಾರ್ಚ್​ ಅವಧಿಯಲ್ಲಿ ರಿಸರ್ವ್​ ಬ್ಯಾಂಕ್​ಗೆ ಜಮೆ ಆಗಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
