ಕೊಚ್ಚಿನ್​:ಮಧ್ಯರಾತ್ರಿಯಲ್ಲಿ ಮಾಲ್​ನಲ್ಲಿ ಸಾವಿರಾರು ಜನರನ್ನು ಕಂಡು ಸ್ವತಃ ಸಿಬ್ಬಂದಿಯೇ ಶಾಕ್​ ಆಗಿದ್ದಾರೆ. ರಾತ್ರಿ 11.50ರ ನಂತರ ಮಾಲ್​ ಬಾಗಿಲ ಮುಂದೆ ಜನರು ಜಮಾಯಿಸಿದ್ದಾರೆ. ಸಿಬ್ಬಂದಿ ಬಾಗಿಲು ತೆಗೆದ ಕೂಡಲೇ ಗುಂಪು ಗುಂಪಾಗಿ ಒಳನುಗ್ಗಿದ್ದಾರೆ. ಇಷ್ಟು ಜನರನ್ನು ನಿರೀಕ್ಷಿಸದ ಸಿಬ್ಬಂದಿಗಳೇ ದಂಗಾಗಿದ್ದಾರೆ.
Remember iPhone launch queues ?Here is our Kerala’s Lulu Mall sale queue at midnight:
pic.twitter.com/X4cCcFDbYi
— Vijay Shekhar Sharma (@vijayshekhar)July 9, 2022

ಅರೇ… ಏನಿದು ಇಷ್ಟು ಜನರು ಮಧ್ಯರಾತ್ರಿ ಏಕೆ ಮಾಲ್​​ಗೆ ಬಂದಿದ್ದಾರೆ. ಅಷ್ಟಕ್ಕೂ ಅಷ್ಟು ಆತುರವಾದರೂ ಏನಿತ್ತು ಎಂಬುದಕ್ಕೆ ಇಲ್ಲಿದೆ ಉತ್ತರ. ಮಾಲ್​ ಮಾಡಿದ ಈ ಒಂದೇ ಯೋಜನೆಗೆ ಸಾವಿರಾರು ಗ್ರಾಹಕರನ್ನು ಪಡೆದು ಲಾಭ ಮಾಡಿಕೊಂಡಿದ್ದಂತೂ ಸತ್ಯ.
Thread on some videos from#Lulumall, cochin !!
Looked like the entire Kochi was in the mall. Reminded me of Saravana stores, chennaipic.twitter.com/AscmYHFljM
— Vineeth K (@DealsDhamaka)July 8, 2022

ಅಂದಹಾಗೆ ಜುಲೈ 7 ರಂದು ಈ ಘಟನೆ ನಡೆದಿದೆ. ಜುಲೈ 6 ರ ರಾತ್ರಿ 11.59ಕ್ಕೆ ಮಾಲ್​ನಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. ಈ ರಿಯಾಯಿತಿ ಕೇವಲ ಒಂದು ರಾತ್ರಿಯವರೆಗೆ ಮಾತ್ರ ಅವಕಾಶ ನೀಡಿತ್ತು. ಇದೇ ಕಾರಣಕ್ಕೆ ರಾತ್ರೋ ರಾತ್ರಿ ಮಾಲ್​ಗೆ ಪ್ರವಾಹದ ರೀತಿಯಲ್ಲಿ ಜನರು ಜಮಾಯಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ. ಕೊಚ್ಚಿನ್​ ಹಾಗೂ ತಿರುವನಂತಪುರಂನಲ್ಲಿರುವ ಎರಡೂ ಮಾಲ್​ನಲ್ಲೂ ಸಾವಿರಾರು ಜನರು ಸೇರಿದ್ದರು.(ಏಜೆನ್ಸೀಸ್​)
VIDEO: ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿದ್ದ ಜನರನ್ನು ಓಡಿಸುತ್ತಿರುವ ಸೀ ಲಯನ್​! ಜಾಲತಾಣದಲ್ಲಿ ಭಾರೀ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
