ನವದೆಹಲಿ:ಅನ್ಯಗ್ರಹ ಜೀವಿಗಳನ್ನು ನಾವು ನೋಡುತ್ತೇವೋ ಇಲ್ಲವೋ.. ಆದರೆ ಅನ್ಯಗ್ರಹ ಜೀವಿಗಳು ನಮ್ಮನ್ನು ನೋಡುತ್ತಿವೆಯಂತೆ. ಅಂಥದ್ದೊಂದು ಅಧ್ಯಯನವೊಂದು ನಡೆದಿದ್ದು, ಅನ್ಯಗ್ರಹ ಜೀವಿಗಳ ಕುರಿತ ಅಂಶವನ್ನು ಹೊರಗೆಡಹಿದೆ.
ಕಾರ್ಲ್​ ಸಗನ್​ ಇನ್​ಸ್ಟಿಟ್ಯೂಟ್​​ನ ಯುನಿವರ್ಸಿಟಿಗಳ ಡೈರೆಕ್ಟರ್​ ಹಾಗೂ ಕಾರ್ನೆಲ್​ನ ಪ್ರೊಫೆಸರ್ ಆಫ್ ಅಸ್ಟ್ರಾನಮಿ ಆಗಿರುವ ಲಿಸಾ ಕಾಲ್ಟೆನೆಗರ್ ನೇತೃತ್ವದ ತಂಡ ಈ ಅಧ್ಯಯನವನ್ನು ಮಾಡಿದೆ. ಇವರು 1004 ನಕ್ಷತ್ರಗಳು ಇರುವಿಕೆಯನ್ನು ಗುರುತಿಸಿದ್ದು, ಅವುಗಳಲ್ಲಿ ಭೂಮಿಯಂಥ ಜೀವಿಸಲು ಯೋಗ್ಯ ಗ್ರಹಗಳಿರುವ ಸಾಧ್ಯತೆಯನ್ನೂ ಅಂದಾಜಿಸಿದ್ದಾರೆ.
ಈ ನಕ್ಷತ್ರಗಳೆಲ್ಲವೂ ಭೂಮಿಯಿಂದ 326 ಜ್ಯೋತಿವರ್ಷಗಳ ದೂರದಲ್ಲಿವೆ. ಆ ಪೈಕಿ ಅತ್ಯಂತ ಹತ್ತಿರದಲ್ಲಿರುವ ನಕ್ಷತ್ರವು ಸೂರ್ಯನಿಂದ 28 ಜ್ಯೋತಿವರ್ಷಗಳ ದೂರದಲ್ಲಿದೆ. ಅಲ್ಲದೆ ಅವುಗಳಲ್ಲಿ ಅತ್ಯಂತ ಪ್ರಖರವಾಗಿರುವಂಥ ನಕ್ಷತ್ರಗಳನ್ನು ರಾತ್ರಿ ಹೊತ್ತಲ್ಲಿ ಬರಿಗಣ್ಣಿಗೆ ಕಾಣಬಹುದು ಎಂದೂ ಹೇಳಿದ್ದಾರೆ.
ನಭೋಮಂಡಲದಲ್ಲಿ ನೂರರಿಂದ ಮುನ್ನೂರು ಶತಲಕ್ಷ ತಾರೆಗಳಿದ್ದು, ಅವುಗಳಲ್ಲಿ ಆಸ್ಟ್ರೇಲಿಯದ ಖಗೋಳಶಾಸ್ತ್ರಜ್ಞರು ಒಂದು ಲಕ್ಷದಷ್ಟು ತಾರೆಗಳ ಅಧ್ಯಯನ ನಡೆಸಿದ್ದಾರೆ. ಆ ಪೈಕಿ ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಪೂರಕ ಅಂಶಗಳೇ ಜಾಸ್ತಿ ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
