ನವದೆಹಲಿ:ಸೋಷಿಯಲ್​ ಮೀಡಿಯಾ ದಿಗ್ಗಜ ಫೇಸ್​ಬುಕ್​ನ ಮಾತೃಕಂಪನಿ ಮೆಟಾ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಟೆಕ್ಸ್ಟ್​ ಬೇಸ್ಡ್ ಸೋಷಿಯಲ್ ಮೀಡಿಯಾ ಥ್ರೆಡ್ಸ್​ ಆರಂಭದಲ್ಲಿ ಭರ್ಜರಿ ಸದ್ದು ಮಾಡಿದ್ದರೂ ಇದೀಗ ಅದರ ಬಳಕೆಯಲ್ಲಿ ಭಾರಿ ಕುಸಿತ ಉಂಟಾಗಿದೆ.
ಟ್ವಿಟರ್​ಗೆ ಪರ್ಯಾಯ ಎಂದು ಹೇಳಲಾದ ಥ್ರೆಡ್ಸ್ ಈ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಂಡಿದ್ದು, ಐದೇ ದಿನಗಳಲ್ಲಿ 10 ಕೋಟಿ ಸೈನ್​ಇನ್ ಕಂಡಿತ್ತು. ಆ ಮೂಲಕ ಅತಿ ಬೇಗ 10 ಕೋಟಿ ಸೈನ್​ಇನ್ ಹೊಂದಿದ ಮೊದಲ ಆ್ಯಪ್ ಎಂಬ ಖ್ಯಾತಿಗೂ ಪಾತ್ರವಾಗಿತ್ತು.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಆದರೆ ಆರಂಭದ ಈ ಜೋಶ್ ಈಗ ಉಳಿದಿಲ್ಲ. ಥ್ರೆಡ್ಸ್​ ಸೈನ್​ಇನ್ ಆದವರ ಪೈಕಿ ಅರ್ಧಕ್ಕಿಂತಲೂ ಅಧಿಕ ಮಂದಿ ಅದನ್ನು ಬಳಸುವುದನ್ನು ನಿಲ್ಲಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೆಟಾ ಸಿಇಒ ಮಾರ್ಕ್​ ಜುಕರ್​​ಬರ್ಗ್​ ಕೂಡ ಕಂಪನಿಯ ಆಂತರಿಕ ಸಭೆಯಲ್ಲಿ ಕೂಡ ಇದನ್ನೇ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
10 ಕೋಟಿಗೂ ಅಧಿಕ ಸೈನ್​ಇನ್​ ಆಗಿದ್ದೂ ಅಷ್ಟೂ ಮಂದಿ ಇಲ್ಲವೇ ಅದರ ಅರ್ಧದಷ್ಟಾದರೂ ಮಂದಿ ಬಳಕೆಯನ್ನು ಮುಂದುವರಿಸಿದರೆ ಅದು ಅದ್ಭುತ. ಆದರೆ ನಾವಿನ್ನೂ ಆ ಹಂತಕ್ಕೆ ತಲುಪಿಲ್ಲ ಎಂಬುದಾಗಿ ಮಾರ್ಕ್ ಹೇಳಿದ್ದಾರೆ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
