ನ್ಯೂಯಾರ್ಕ್​:ಮೈಕ್ರೋಬ್ಲಾಗಿಂಗಗ ವೇದಿಕೆ ಟ್ವೀಟರ್​ಗೆ ಪರ್ಯಾಯ ಎಂಬಂತೆ ಬಿಂಬಿತವಾಗಿರುವ ಥ್ರೆಡ್ಸ್​ ಆ್ಯಪ್​ ಗುರುವಾರ ಬಿಡುಗಡೆಯಾಗಿದೆ. ಫೇಸ್​ಬುಕ್​ ಒಡೆತನದ ಮೆಟಾ ಕಂಪನಿಯ ಈ ಹೊಸ ಅಪ್ಲಿಕೇಶನ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಏಕೆಂದರೆ ಥ್ರೆಡ್ಸ್​ನಲ್ಲಿ ಸುಲಭವಾಗಿ ಲಾಗಿನ್​ ಆಗಬಹುದಾಗಿದೆ. ಆದರೆ, ಲಾಗೌಟ್​ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ. ಹೊಸ ಆ್ಯಪ್​ ಹೇಗಿದೆ ನೋಡುವ ಎಂದು ನೀವು ಒಮ್ಮೆ ಖಾತೆಯನ್ನು ಸೃಜಿಸಿದರೆ ಅದನ್ನು ಯಾವುದೇ ಕಾರಣಕ್ಕೂ ಡಿಲೀಟ್​ ಮಾಡುವುದಕ್ಕೆ ಸಾಧ್ಯವಿಲ್ಲ.
ಒಂದು ವೇಳೆ ನೀವು ಹಾಗೆ​ ಮಾಡಲು ಮುಂದಾದರೆ ಮೊದಲಿಗೆ ನಿಮ್ಮ ಇನ್ಸ್​​ಟಾಗ್ರಾಂ ಖಾತೆಯನ್ನು ಡಿಲೀಟ್​ ಮಾಡಿದಾಗ ಮಾತ್ರ ಥ್ರೆಡ್ಸ್​ ಖಾತೆಯನ್ನು ಶಾಶ್ವತವಾಗಿ ಡಿಲೀಟ್​ ಮಾಡಲು ಸಾಧ್ಯ ಎಂದು ಪ್ರೈವಸಿ ಪಾಲಿಸಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:AIADMKಯ ಏಕೈಕ ಸಂಸದನ ಆಯ್ಕೆ ಅಸಿಂಧುಗೊಳಿಸಿದ ಮದ್ರಾಸ್​ ಹೈಕೋರ್ಟ್​
ಥ್ರೆಡ್ಸ್​ ಖಾತೆಯನ್ನು ಒಮ್ಮೆ ಡಿಲೀಟ್​ ಮಾಡಿದರೆ ಬೇರೆಯವರು ನೋಡಲು ಸಾಧ್ಯವಿಲ್ಲ. ಆಧರೆ, ನೀವು ಹಂಚಿಕೊಂಡ ಪೋಸ್ಟ್​ಗಳು ಮಾತ್ರ ಆ್ಯಪ್​ನ ಸರ್ವರ್​ ಅಲ್ಲಿ ಲೈವ್​ ಸ್ಟ್ರೀಮ್​ ಆಗುತ್ತಿರುತ್ತವೆ. ಖಾತೆಯನ್ನು ನಿಷ್ಕ್ರಿಯಗೊಳಿಸುವ ಮುನ್ನ ನಿಮ್ಮ ಪೋಸ್ಟ್​ಗಳನ್ನು ಒಂದೊಂದಾಗಿ ಡಿಲೀಟ್​ ಮಾಡಿದರೆ ಮಾತ್ರ ಎಲ್ಲೂ ಕಾಣದಂತೆ ಮಾಡಲು ಸಾಧ್ಯವಾಗುತ್ತದೆ.
ಒಂದು ವೇಳೆ ಇನ್ಸ್​​ಟಾಗ್ರಾಂ ಖಾತೆಯನ್ನು ನೀವು ಡಿಲೀಟ್​ ಮಾಡಿದರೆ ಥ್ರೆಡ್ಸ್​ ಆ್ಯಪ್​ನಲ್ಲಿ ನೀವು ಹಂಚಿಕೊಂಡ ಮಾಹಿತಿ 90 ದಿನಗಳವರೆಗೂ ಸರ್ವರ್​ನಲ್ಲಿ ಉಳಿದಿರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seventeen =
Remember me
