ಮುಂಬೈ :ದೇಶದ ಮಂದಿರಗಳು, ಏರ್​ಪೋರ್ಟ್​ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸುವ ಬೆದರಿಕೆಯುಳ್ಳ ಈ-ಮೇಲ್ ಒಂದು ಸಿಆರ್​ಪಿಎಫ್​ ಮುಂಬೈ ಕಚೇರಿ ತಲುಪಿದೆ. ಈ ಮೇಲ್​​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬೆದರಿಕೆ ಕೂಡ ಇದೆ ಎನ್ನಲಾಗಿದೆ.
ಭಾರತದಲ್ಲಿ ಲಷ್ಕರ್​-ಎ-ತೈಬಾದ ಆತಂಕವಾದಿಗಳು ಮುಚ್ಚಿಟ್ಟುಕೊಂಡಿದ್ದಾರೆ. ಮೂರು ರಾಜ್ಯಗಳಲ್ಲಿ 200 ಕಿಲೋಗ್ರಾಮ್ ಹೈಗ್ರೇಡ್​ ಆರ್​ಡಿಎಕ್ಸ್​ ಶೇಖರಿಸಲಾಗಿದೆ. ಮತ್ತು 11 ಸೂಯಿಸೈಡ್ ಬಾಂಬರ್​ಗಳು ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎಂದು ಈ-ಮೇಲ್​ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪ್ಲೀಸ್‌ ನಕ್ಸಲ್‌ ಅಂಕಲ್‌… ಅಪ್ಪನನ್ನು ಮನೆಗೆ ಕಳುಹಿಸಿ… ಅವರಿಗೆ ಏನೂ ಮಾಡಬೇಡಿ….
ಅಮಿತ್​ ಷಾ​ ಅವರನ್ನು ಮತ್ತು ಆದಿತ್ಯನಾಥರನ್ನು ಸೂಯಿಸೈಡ್​ ಅಟ್ಯಾಕ್ ಮೂಲಕ ‘ಎಲಿಮಿನೇಟ್’ ಮಾಡುವುದಾಗಿ ಸದರಿ ಮೇಲ್​ನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ-ಮೇಲ್​ನ ಮೂಲವನ್ನು ಕಂಡುಹಿಡಿಯುವ ಪ್ರಯತ್ನದೊಂದಿಗೆ ಸಿಆರ್​ಪಿಎಫ್​ ಮತ್ತು ಬೇಹುಗಾರಿಕೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್​​ನ ಆರ್ಚ್​ ರೆಡಿ

90 ಮತದಾರರಿದ್ದ ಬೂತ್​ನಲ್ಲಿ 171 ಮತ ಚಲಾವಣೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
