ಚಂಡಿಗಢ:ಫ್ರಾನ್ಸ್​​ನಿಂದ ಇತ್ತೀಚೆಗಷ್ಟೇ ಬಂದು ಭಾರತೀಯ ವಾಯು ಪಡೆ ಸೇರ್ಪಡೆಗೊಂಡಿರುವ ರಫೇಲ್​ ಜೆಟ್​​ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ.
ಭಾರತ ಮತ್ತು ಫ್ರಾನ್ಸ್​ ನಡುವಿನ ಒಪ್ಪಂದದಂತೆ ಮೊದಲ ಹಂತದಲ್ಲಿ ಒಟ್ಟು 5 ರಫೇಲ್​ ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಲ್ಯಾಂಡ್​ ಆಗಿರುವ ಜೆಟ್​ಗಳು ತಾಲೀಮಿನಲ್ಲಿ ನಿರತವಾಗಿವೆ.ಇದೀಗ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿರುವ ರಫೇಲ್ ಜೆಟ್​​ಗಳನ್ನು ಸ್ಫೋಟಿಸುವುದಾಗಿ ಶುಕ್ರವಾರ ಪತ್ರ ಬಂದಿದೆ. ಈ ಪತ್ರ ನೋಡಿದರೆ ಯಾರೋ ಕಿಡಿಗೇಡಿಗಳು ಕಳಿಸಿದ್ದೆಂದು ಭಾಸವಾಗುತ್ತಿದೆ. ಸ್ಥಳೀಯ ಆಡಳಿತ ದೂರು ನೀಡಿದ್ದು, ಸದ್ಯ ಅಂಬಾಲ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ:ಕೆಲಸ ಕಳೆದುಕೊಂಡ ಮೂವರು ಸ್ನೇಹಿತರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು
ಅಂಬಾಲ ವಾಯುನೆಲೆ ಸುತ್ತಲೂ ಹಳ್ಳಿಗಳು ಇದ್ದು, ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯೂ ಇದೆ.(ಏಜೆನ್ಸೀಸ್​)
‘ನಿಮ್ಮೆಲ್ಲ ವಿಘ್ನಗಳು ದೂರವಾಗಲಿ…’ ಭಾರತೀಯರಿಗೆ ಗಣೇಶ ಚೌತಿ ಶುಭಾಶಯ ಕೋರಿದ ಜೋ ಬಿಡೆನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
