ಕಾನ್ಪುರ:ನನಗೆ ಬಿಜೆಪಿ ನಾಯಕನೋರ್ವನಿಂದ ಜೀವ ಬೆದರಿಕೆ ಇದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಹೇಳಿದ್ದಾರೆ.
ಕನೌಜ್​​ನಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ನನಗೆ ಬಿಜೆಪಿ ನಾಯಕನೋರ್ವನಿಂದ ಜೀವ ಬೆದರಿಕೆ ಇದೆ. ಮೆಸೇಜ್​ ಕೂಡ ಬಂದಿದೆ. ಅದನ್ನೆಲ್ಲ ನನ್ನ ಮೊಬೈಲ್​ನಲ್ಲಿ ಸೇವ್​ ಮಾಡಿಟ್ಟುಕೊಂಡಿದ್ದೇನೆ. ಈ ವಿಷಯಗಳ ಬಗ್ಗೆ ಇನ್ನೊಂದೆರಡು ದಿನಗಳಲ್ಲಿ ಲಖನೌದಲ್ಲಿ ಮಾಧ್ಯಮಗಳ ಎದುರು ಮಾತನಾಡುತ್ತೇನೆ ಎಂದಿದ್ದಾರೆ.
ದೇಶದಲ್ಲಿ ಹಣದುಬ್ಬರ ಅಧಿಕವಾಗುತ್ತಿರುವ ಬಗ್ಗೆ ಅಖಿಲೇಶ್​ ಯಾದವ್​ ಪಕ್ಷದ ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಯುವಕನೋರ್ವ ಎದ್ದು ನಿಂತು, ಒಂದೊಮ್ಮೆ ನೀವು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಏನು ಯೋಜನೆ ಅನುಷ್ಠಾನಕ್ಕೆ ತರುತ್ತೀರಿ ಎಂದು ಕೇಳಿದ.ಆದರೆ ಅಖಿಲೇಶ್ ಯಾದವ್​ಗೆ ಆತ ಮಾತನಾಡುತ್ತಿರುವುದು ಸರಿಯಾಗಿ ಕೇಳುತ್ತಿರಲಿಲ್ಲ. ಹಾಗಾಗಿ ಹತ್ತಿರ ಬಂದು ಹೇಳು ಎಂದು ಯುವಕನಿಗೆ ಹೇಳಿದರು.
ಆಗ ಯುವಕ ಜೈ ಶ್ರೀರಾಮ್​ ಎಂದು ದೊಡ್ಡದಾಗಿ ಕೂಗಿದ. ನೀನು ಭಾರತೀಯ ಜನತಾ ಪಾರ್ಟಿಗೆ ಸೇರಿದವನಾ ಎಂದು ಅಖಿಲೇಶ್​ ಆತನಲ್ಲಿ ಪ್ರಶ್ನಿಸಿದರು. ಅದಕ್ಕಾತ ನಾನು ಶ್ರೀರಾಮ, ಕೃಷ್ಣ, ವಿಷ್ಣು, ಶಿವ ಎಲ್ಲ ದೇವರನ್ನೂ ಪೂಜೆ ಮಾಡುತ್ತೇನೆ ಎಂದು ಉತ್ತರಿಸಿದ.
ಅದಾದ ಬಳಿಕ ಅಖಿಲೇಶ್​ ಯಾದವ್​ ಪೊಲೀಸರಿಗೆ ಈ ವಿಚಾರ ತಿಳಿಸಿದರು. ಅಲ್ಲದೆ, ಆ ಯುವಕ ಭದ್ರತೆಯನ್ನೂ ಮೀರಿ ಬಂದು ಅದ್ಹೇಗೆ ಜೈ ಶ್ರೀರಾಮ್​ ಎಂದು ಕೂಗಿದ? ಆತನನ್ನು ಕರೆದುಕೊಂಡು ಬಂದು ನನ್ನೆದುರು ನಿಲ್ಲಿಸಿ. ಅಲ್ಲದೆ, ಅವನು ಯಾರು, ಎಲ್ಲಿಯವನು, ಆತನ ತಂದೆ ಯಾರು ಎಂಬೆಲ್ಲ ಮಾಹಿತಿಗಳೂ ಬೇಕು ಎಂದು ಹೇಳಿದರು. ಆ ಯುವಕ ತಂದಿದ್ದ ಬ್ಯಾಗ್​ ಕೂಡ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು. ಈ ಘಟನೆ ನಡೆದ ಬಳಿಕ ತನಗೆ ಬಿಜೆಪಿ ನಾಯಕನೋರ್ವನಿಂದ ಬೆದರಿಕೆ ಇರುವುದಾಗಿ ಅಖಿಲೇಶ್​ ಬಹಿರಂಗ ಪಡಿಸಿದರು.
ಅಲ್ಲದೆ ಈಗೆರಡು ದಿನಗಳ ಹಿಂದ ಬಿಜೆಪಿ ನಾಯಕ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಈಗ ಈ ವ್ಯಕ್ತಿ ಭದ್ರತೆಯನ್ನೂ ಮೀರಿ ನನ್ನ ಬಳಿ ಬರಲು ಪ್ರಯತ್ನಿಸಿದ್ದಾನೆ. ನನಗೇನಾದರೂ ಆದರೆ ಯಾರು ಹೊಣೆ? ಆತನನ್ನು ಯಾವ ಪ್ರಕರಣದಡಿ ಬಂಧಿಸುತ್ತೀರಿ? ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದರು.
ಜೈ ಶ್ರೀರಾಮ್​ ಎಂದು ಕೂಗಿದ ವ್ಯಕ್ತಿಯನ್ನು ಗೋವಿಂದ್ ಶುಕ್ಲಾ ಎಂದು ಗುರುತಿಸಲಾಗಿದೆ. ಈತ ಗುಗ್ರಾಪುರ ಗ್ರಾಮದವನು. ಶಾಂತಿ ಕದಡಿದ ಆರೋಪದಡಿ ಅವನ ಮೇಲೆ ಪ್ರಕರಣ ದಾಖಲಾಗುವುದು.ಈತ ಪದವೀಧರ. ಕಾನ್ಪುರದಲ್ಲಿ ಎಲ್​ಎಲ್​ಬಿ ಓದುತ್ತಿದ್ದಾನೆ ಎಂದು ಪೊಲೀಸ್​ ಅಧಿಕಾರಿ ವಿನೋದ್ ಮಿಶ್ರಾ ತಿಳಿಸಿದ್ದಾರೆ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
