ನವದೆಹಲಿ:ದೇಶದಲ್ಲಿ ಆಗಾಗ ವರದಿ ಆಗುತ್ತಲೇ ಇರುವ ಗ್ಯಾಂಗ್ ರೇಪ್ ಪ್ರಕರಣ ಮತ್ತೆ ಮುಂದುವರಿದಿದ್ದು, ಈ ಸಲ ರಾಷ್ಟ್ರ ರಾಜಧಾನಿಯಲ್ಲೇ ಸಾಮೂಹಿಕ ಅತ್ಯಾಚಾರ ನಡೆದಿದೆ. ಅದರಲ್ಲೂ ಆಸ್ಪತ್ರೆವೊಂದರ ಪಾರ್ಕಿಂಗ್ ಲಾಟ್​ನಲ್ಲಿ ಈ ಅತ್ಯಾಚಾರ ನಡೆದಿದೆ.
ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಎಂಬಂತೆ ಆಸ್ಪತ್ರೆಯಲ್ಲಿದ್ದ ಭದ್ರತಾ ಸಿಬ್ಬಂದಿಯೇ ಇದರ ಪ್ರಮುಖ ಆರೋಪಿ. ಶನಿವಾರ ಸಂಜೆ ಬಳಿಕ ದೆಹಲಿಯ ರೋಹಿಣಿ ಜಿಲ್ಲೆಯ ಆಸ್ಪತ್ರೆವೊಂದರಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ಜರುಗಿದೆ.
ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಎಂದಿನಂತೆ ವಾರ್ಡ್​ಗಳ ಪರಿಶೀಲನೆಯಲ್ಲಿ ತೊಡಗಿದ್ದಾಗ ಮಹಿಳೆಯೊಬ್ಬರು ರೋಗಿಯ ಪಕ್ಕದಲ್ಲಿ ಇದ್ದದ್ದನ್ನು ಗಮನಿಸಿದ್ದಾನೆ. ಆಗ ರೋಗಿಯ ಬಗ್ಗೆ ಮಾಹಿತಿ ಕೇಳಿದಾಗ ಕೊಡುವಲ್ಲಿ ವಿಫಲವಾದ ಆಕೆಯನ್ನು ಪಾರ್ಕಿಂಗ್ ಲಾಟ್​ವರೆಗೆ ಕರೆದೊಯ್ದು ತಪಾಸಣೆ ನೆಪದಲ್ಲಿ ಮೈಮೇಲೆ ಕೈ ಹಾಕಿದ್ದಾನೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಹಳೇ ಬೌನ್ಸರ್ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ಸೇರಿಕೊಂಡಿದ್ದು, ಬಳಿಕ ಮೂವರೂ ಜತೆಯಾಗಿ ಆ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಪ್ರಕರಣದ ಬಳಿಕ ಸಂತ್ರಸ್ತ ಮಹಿಳೆ ಸ್ನೇಹಿತರೊಬ್ಬರ ಜತೆ ಪೊಲೀಸ್​ ಠಾಣೆಗೆ ಧಾವಿಸಿ, ನಡೆದಿದ್ದನ್ನೆಲ್ಲ ವಿವರಿಸಿದ್ದಾರೆ. ಸಂತ್ರಸ್ತೆ ನೀಡಿದ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕನ್ವರ್​ಪಾಲ್​, ಬೌನ್ಸರ್​ಗಳಾದ ಪ್ರವೀಣ್​ ಹಾಗೂ ಮನೀಶ್ ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರೋಹಿಣಿ ಪಿ.ಕೆ. ಮಿಶ್ರಾ ತಿಳಿಸಿದ್ದಾರೆ.
ಬೌನ್ಸರ್ಸ್​ಗಳನ್ನು ಈ ಹಿಂದೆಯೇ ಕೆಲಸದಿಂದ ತೆಗೆಯಲಾಗಿದ್ದರೂ ಆಗಾಗ ಆಸ್ಪತ್ರೆಗೆ ಬರುತ್ತಿದ್ದರು. ಪ್ರಕರಣದ ಬಳಿಕ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
