ತಮಿಳುನಾಡು:ಪೊಲೀಸ್ ಪೇದೆಯೊಬ್ಬರಿಗೆ ಹರಿತವಾದ ಆಯುಧಗಳಿಂದ ಬೆದರಿಸಿ, ಅವರನ್ನು ಅಟ್ಟಾಡಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ವರದಿಯಾಗಿದೆ.
ಇದನ್ನೂ ಓದಿ:Bagalkot DHO Officers Clash Continues | 2ನೇ ದಿನಕ್ಕೆ ಕಾಲಿಟ್ಟ ಬಾಗಲಕೋಟೆ ಡಿಎಚ್​ಒ ಕುರ್ಚಿ ಕಿತ್ತಾಟ
ಘಟನೆಯ ವಿವರ:47 ವರ್ಷದ ತಿರುಮಾವಳವನ್ ಎಂಬ ವ್ಯಕ್ತಿಯೊಬ್ಬರು ಭಾನುವಾರ (ಆಗಸ್ಟ್​ 20) ಕಟ್ಟುಪಾಕ್ಕಂನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹಿಂದಿರುಗುವಾಗ ರಸ್ತೆಯ ಮಧ್ಯೆ ಅವರನ್ನು ಅಡ್ಡಗಟ್ಟಿದ ಮೂವರು ವ್ಯಕ್ತಿಗಳು, ಗಾಂಜಾ ಸೇವನೆಯ ಅಮಲಿನಲ್ಲಿದ್ದರು ಎಂದು ಹೇಳಲಾಗಿದ್ದು, ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಮೂವರ ವರ್ತನೆ ಕಂಡ ತಿರುಮಾವಳವನ್ ತಕ್ಷಣವೇ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ, ಹತ್ತಿರದ ಪೊಲೀಸ್ ಠಾಣೆಯಿಂದ ಪೊಲೀಸರ ಸಹಾಯವನ್ನು ಕೋರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಂಗಾಡು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸರವಣನ್, ಘಟನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೇದೆಗೆ ಹರಿತವಾದ ಆಯುಧಗಳನ್ನು ತೋರಿಸಿ, ಅವರನ್ನು ಅಟ್ಟಾಡಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ರಾಖಿ ಕುರಿತು ಆದಿಲ್​ ಖಾನ್​ ಶಾಕಿಂಗ್​ ಹೇಳಿಕೆ- ‘ರಾಖಿಗೆ ರಿತೇಶ್​ ಜೊತೆ ಸಂಬಂಧವಿತ್ತು, ನಾನು ಮೂರ್ಖನಾದೆ ಅಷ್ಟೆ’
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ಮೂವರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಆರೋಪಿಗಳನ್ನು ಶಬರಿ, ಸಂತೋಷ್ ಮತ್ತು ಸೂರ್ಯ ಎಂದು ಗುರುತಿಸಲಾಗಿದೆ. ಮಾದಕ ವ್ಯಸನದ ಅಮಲಿನಲ್ಲಿ ಪುರುಷರಿಂದ ಇಂತಹ ದಾಳಿಗಳನ್ನು ನಾವು ಆಗಾಗ್ಗೆ ನೋಡುತ್ತೇವೆ ಎಂದು ಸ್ಥಳೀಯರು ದೂರು ನೀಡಿದ್ದಾರೆ,(ಏಜೆನ್ಸೀಸ್).
ಇಬ್ಬರು ಟಾಪ್​ ನಟರ ಸಿನಿಮಾಗೆ ಪ್ರಿಯಾಂಕಾ ಮೋಹನ್ ನಾಯಕಿ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
