ನವದೆಹಲಿ:ಕೇವಲ ಆರು ದಿನಗಳ ಅಂತರದಲ್ಲಿ ಮೂವರು ಸಹೋದರರು ಕೋವಿಡ್​ಗೆ ಬಲಿಯಾದರೆ, 14 ದಿನಗಳ ಅಂತರದಲ್ಲಿ 13 ವರ್ಷದ ಬಾಲಕಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥೆಯಾಗಿದ್ದಾಳೆ. ಇದು ಕೋವಿಡ್​-19 ಪಿಡುಗು ಸೃಷ್ಟಿಸಿರುವ ಅವಾಂತರ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಇದು ಪುಣೆಯ ಪಿಂಪ್ರಿ-ಚಿಂಚಡಾಡ ಕೈಗಾರಿಕಾ ನಗರದಲ್ಲಿ ಸೃಷ್ಟಿಯಾಗಿರುವ ಅವಾಂತರ. ಈ ಪ್ರದೇಶದಲ್ಲಿ ಇದುವರೆಗೂ 10 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು, 220ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಮೃತ ಸಹೋದರರು ತಮ್ಮ ಕುಟುಂಬದ ಇತರೆ ಸದಸ್ಯರೊಂದಿಗೆ ಒಟ್ಟುಕುಟುಂಬವಾಗಿ ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು. ಕ್ರಮವಾಹಗಿ 68, 61 ಮತ್ತು 56 ವರ್ಷ ವಯಸ್ಸಿನವರಾಗಿದ್ದ ಈ ಸಹೋದರರು ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಲೇ ಇರಲಿಲ್ಲ. ಮೊದಲು ಇವರೆಲ್ಲರೂ ಪುಣೆಯ ಖಾರಲ್​ವಾಡಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರೂ, ಬಳಿಕ ಪಿಂಪ್ರಿಯಲ್ಲಿ ಸ್ವಂತ ಕಟ್ಟಡ ಕಟ್ಟಿಸಿಕೊಂಡು ಎಲ್ಲರೂ ಒಟ್ಟಿಗೆ ಬದುಕಲಾಂಭಿಸಿದ್ದರು ಎಂದು ಕುಟುಂಬದ ಆಪ್ತರಾದ ವಕೀಲ ಸುಶಿಲ್​ ಮಂಚ್ರಾಕರ್​ ತಿಳಿಸಿದ್ದಾರೆ.
56 ವರ್ಷದ ಸಹೋದರನಿಗೆ ಪಾರ್ಶ್ವವಾಯು ಬಡಿದಿತ್ತು. ಇನ್ನುಳಿದ ಇಬ್ಬರು ಕೆಲದಿನಗಳ ಹಿಂದಷ್ಟೇ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಮೂರೂ ಮಂದಿ ಬಿಪಿ ಮತ್ತು ಮಧುಮೇಹದಿಂದಲೂ ಬಳಲುತ್ತಿದ್ದರು. ಈ ಮೂವರು ಮಕ್ಕಳ ಪೈಕಿ ಒಬ್ಬ ಪುತ್ರನಿಗೆ ಮೊದಲು ಕರೊನಾ ಸೋಂಕು ತಗುಲಿತ್ತು. ನಂತರದಲ್ಲಿ ಇದು ಇಡೀ ಕುಟುಂಬಕ್ಕೆ ಹರಡಿತ್ತು. ಕುಟುಂಬದ ಉಳಿದೆಲ್ಲ ಸದಸ್ಯರು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡರೆ, ಮೊದಲಿಗೆ 56 ವರ್ಷದ ಸಹೋದರ ನಂತರ 68 ವರ್ಷದವರು ಬಳಿಕ 61 ವರ್ಷದ ಸಹೋದರ ಜು.12, 13 ಮತ್ತು 18ರಂದು ಮೃತಪಟ್ಟರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನೇಪಾಳ ರಾಜಕೀಯ: ಆಡಳಿತಾರೂಢ ಕಮ್ಯೂನಿಸ್ಟ್ ಪಾರ್ಟಿಯ ಮಹತ್ವದ ಸಭೆ ಶುರು, ಪ್ರಧಾನಿ ಒಲಿ ಗೈರು
ಇನ್ನೊಂದು ಕುಟುಂಬದಲ್ಲಿ ಪತಿ ಮತ್ತು ಪತ್ನಿ ಕೇವಲ 14 ದಿನಗಳ ಅಂತರದಲ್ಲಿ ಕೋವಿಡ್​-19ಕ್ಕೆ ಬಲಿಯಾಗಿದ್ದಾರೆ. ಮೊದಲಿಗೆ ಪತ್ನಿಗೆ ಕರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ ಒಂದೂವರೆ ಗಂಟೆಯೊಳಗೆ ಅವರು ಮೃತಪಟ್ಟರು ಎನ್ನಲಾಗಿದೆ.
ಇದಕ್ಕೂ ಮುನ್ನ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೂತ್ರಪಿಂಡ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆತನನ್ನು ನೋಡಿಕೊಳ್ಳಲು ಪತ್ನಿ ಆಸ್ಪತ್ರೆಗೆ ಓಡಾಡುತ್ತಿದ್ದರು. ತುಂಬಾ ಒತ್ತಡದಲ್ಲಿದ್ದ ಅವರಿಗೆ ಕರೊನಾ ಸೋಂಕು ತಗುಲಿತ್ತು. ಜು.6ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದರಿಂದ ಮತ್ತಷ್ಟು ಒತ್ತಡಕ್ಕೆ ಒಳಗಾದ ಅವರು ಕೇವಲ ಒಂದೂವರೆ ಗಂಟೆಯಲ್ಲಿ ಅಸುನೀಗಿದರು ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಇದಾದ ಬಳಿಕ 13 ವರ್ಷದ ಪುತ್ರಿ ಒಬ್ಬಳೇ ಮನೆಯಲ್ಲಿ ಇರುತ್ತಾಳೆ. ಆಕೆಯನ್ನು ನೋಡಿಕೊಳ್ಳಬೇಕು ಎಂದು ಹೇಳಿ ಪತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಮನೆಗೆ ಮರಳಿದ್ದರು. ಅವರು ವಾಸವಾಗಿದ್ದ ಅಪಾರ್ಟ್​ಮೆಂಟ್​ ನಿವಾಸಿಗಳು ಅವರಿಬ್ಬರನ್ನೂ ಕೋವಿಡ್​-19 ತಪಾಸಣೆಗೆ ಒಳಪಡಿಸಿದ್ದರು. ಫಲಿತಾಂಶ ನೆಗೆಟಿವ್​ ಬಂದಿತ್ತು. ಆದರೆ ಭಾನುವಾರ ಮಧ್ಯಾಹ್ನದ ವೇಳೆಗೆ ಅವರು ಕೂಡ ಮೃತಪಟ್ಟರು. ಈ ರೀತಿ 13 ವರ್ಷದ ಬಾಲಕಿ ಈಗ ಅನಾಥಳಾಗಿದ್ದಾಳೆ ಎಂದು ಹೇಳಿದ್ದಾರೆ.
ಸದ್ಯ ಅಪಾರ್ಟ್​ಮೆಂಟ್​ನ ಜನರು ಬಾಲಕಿಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಅದು ಬಾಡಿಗೆಯ ಅಪಾರ್ಟ್​ಮೆಂಟ್​ ಆಗಿದೆ. ಹಾಗಾಗಿ ಬಾಲಕಿಗೆ ಹೆಚ್ಚುಕಾಲ ಅಲ್ಲಿರಲೂ ಸಾಧ್ಯವಿಲ್ಲ. ಇದರಿಂದಾಗಿ ಆ ಬಾಲಕಿ ಸೂರನ್ನೂ ಕಳೆದುಕೊಂಡು ಬೀದಿಗೆ ಬೀಳುವ ಭೀತಿ ಆವರಿಸಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್​ ಬಾಟಲಿಯೊಂದಿಗೆ ಪೊಲೀಸ್ ಠಾಣೆಗೆ ಬಂದು ಬೆಂಕಿ ಹಚ್ಚಿಕೊಂಡು ಹೊರಗೆ ಓಡಿದ ಮೊಬೈಲ್ ಕಳ್ಳ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + twenty =
Remember me
