ಒಡಿಶಾ:ಸಂಬಂಧಿಕರ ಮನೆಗೆಂದು ಹೋಗಿದ್ದ ನಾಲ್ವರು ಸಹೋದರರಲ್ಲಿ ಮೂವರು ಸಾವಿಗೀಡಾಗಿದ್ದು, ಇನ್ನೊಬ್ಬ ನಾಪತ್ತೆಯಾಗಿರುವ ಅತ್ಯಂತ ಕರುಣಾಜನಕ ಪ್ರಕರಣವೊಂದು ಸಂಭವಿಸಿದೆ. ಒಡಿಶಾದಲ್ಲಿ ಇಂಥದ್ದೊಂದು ದುರಂತ ನಡೆದಿದೆ.
ಜಾರ್ಖಂಡ್​​ನ ಸಹೋದರರಾದ ರಿಶಿ ಸಾಹು, ಆಯುಷ್ ಸಾಹು, ಕುನಾಲ್ ಸಾಹು ಮತ್ತು ಕೌಶಲ್ ಸಾಹು ತಮ್ಮ ಪಾಲಕರೊಂದಿಗೆ ಒಡಿಶಾದ ರೂರ್ಕೆಲಾದ ಜಿರಿಪಾನಿ ಎಂಬಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು.
ಇಲ್ಲಿಗೆ ಬಂದಿದ್ದ ಸಹೋದರರು ಇಂದು ಮಧ್ಯಾಹ್ನ ಇಲ್ಲಿನ ಕೋಯೆಲ್ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಮೂವರು ನೀರು ಪಾಲಾಗಿ ರಕ್ಷಣೆ ಮಾಡಲಾಯಿತಾದರೂ ಸಾವಿಗೀಡಾಗಿದ್ದರು. ಅವರು ಸಾವಿಗೀಡಾಗಿದ್ದನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು ಖಚಿತ ಪಡಿಸಿದ್ದಾರೆ. ಇನ್ನೊಬ್ಬ ಸಹೋದರ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ.
ವಿಶಾಲ ಗಾಣಿಗ ಕೊಲೆ ಪ್ರಕರಣ: ಇನ್ನೊಬ್ಬ ಸುಪಾರಿ ಕಿಲ್ಲರ್ ಬಂಧನ..

ಕಾರು ಪಲ್ಟಿಯಾಗಿ ಮಗು ಸಾವು, ತಂದೆ-ತಾಯಿ ಪಾರು: ದೇವಸ್ಥಾನದಿಂದ ಮರಳುತ್ತಿರುವಾಗ ಅಪಘಾತ..

ಬ್ಯಾಂಕ್, ಢಾಬಾ, ಬಾರ್ ಇದ್ದ ಬಹುಮಹಡಿ ಕಟ್ಟಡ ಕುಸಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
