ಯಾದಾದ್ರಿ:ಇತ್ತೀಚಿಗೆ ರೈಲು ಸಂಬಂಧ ದುರಂತಗಳು ಹೆಚ್ಚಾಗುತ್ತಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ತೆಲಂಗಾಣದ ಯಾದಾದ್ರಿ ಬಳಿ ನಡೆದಿದೆ.
ಇದನ್ನೂ ಓದಿ:ಇದು​ ಐದು ಗ್ಯಾರಂಟಿ ಮತ್ತು ಪ್ರಣಾಳಿಕೆ ಅಂಶಗಳನ್ನು ಒಳಗೊಂಡ ಬಜೆಟ್​​​: ಸಿಎಂ ಸಿದ್ದರಾಮಯ್ಯ
ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್‌ಪ್ರೆಸ್‌ನ S3, S4 ಮತ್ತು S5 ಕೋಚ್‌ಗಳು ಬೆಂಕಿಗಾಹುತಿಯಾಗಿದ್ದು, ಬೆಂಕಿ ಹೊತ್ತಿಕೊಂಡ ತಕ್ಷಣ ಹೌರಾ-ಸಿಕಂದರಾಬಾದ್ ರೈಲನ್ನು ಬೊಮ್ಮಾಯಿಳ್ಳಿ ಗ್ರಾಮದ ಬಳಿ ನಿಲ್ಲಿಸಲಾಯಿತು. ಜ್ವಾಲೆ ಹರಡುವ ಮುನ್ನವೇ ಬೋಗಿಯಿಂದ ಪ್ರಯಾಣಿಕರು ಜಿಗಿದಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
VIDEO | Several coaches of Howrah-Secunderabad Falaknuma Express caught fire earlier today. No injury was reported in the incident. More details are awaited.pic.twitter.com/qcX4i2maLY
— Press Trust of India (@PTI_News)July 7, 2023

ದಟ್ಟವಾದ ಕಪ್ಪು ಹೊಗೆ ಮೂರು ಬೋಗಿಗಳಲ್ಲಿ ಆವರಿಸಿದ್ದು, ಫಲಕ್ನುಮಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ ಮೂಲಕ ಸ್ಥಳಾಂತರಿಸಲಾಗಿದೆ. ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ರೈಲ್ವೆ ಇಲಾಖೆಗಳು ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ತೆಲಂಗಾಣ ಡಿಜಿಪಿ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
