ಪಲಕ್ಕಾಡ್​:ಓಣಂ ಹಬ್ಬದ ಸಂಭ್ರಮಾಚರಣೆಗೆಂದು ಊರಿಗೆ ಬಂದಿದ್ದ ಮೂವರು ಸಹೋದರಿಯರು ತಂದೆಯೇ ಮುಂದೆಯೇ ದುರಂತ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ನಶಿದಾ (26) ರಮ್ಶಿನಾ (23) ಮತ್ತು ರಿನ್ಶಿ (18) ಎಂದು ಗುರುತಿಸಲಾಗಿದೆ. ಇವರು ಪಲಕ್ಕಾಡ್​ ಜಿಲ್ಲೆಯ ಮನ್ನಾರ್ಕಾಡು ತಾಲೂಕಿನ ಕೊಟ್ಟೊಪ್ಪಡಂ ಮೂಲದ ನಿವಾಸಿಗಳು. ಕಣ್ಣ ಮುಂದೆಯೇ ಮೂವರು ಮಕ್ಕಳು ನೀರು ಪಾಲಾಗಿದ್ದು, ತಂದೆಯನ್ನು ಭಾರೀ ಆಘಾತಕ್ಕೆ ದೂಡಿದೆ.
ಮದುವೆಯಾದ ರಮ್ಶಿನಾ ಮತ್ತು ನಶಿದಾ ಓಣಂ ಹಬ್ಬದ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದರು. ಅವರ ಸಹೋದರ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆ ಹಿಡಿದಿದ್ದಾರೆ. ಮೂತ್ರಪಿಂಡದ ದಾನಿಯಾಗಿರುವ ಅವರ ತಾಯಿಯೂ ಸಹ ಹಾಸಿಗೆ ಹಿಡಿದಿದ್ದಾರೆ. ಇಬ್ಬರಿಗೂ ಚಿಕಿತ್ಸೆ ಮುಂದುವರಿದಿರುವುದರಿಂದ ತಂದೆಯೇ ಮನೆಯ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ತಂದೆಯೊಂದಿಗೆ ಮೂವರು ಹೆಣ್ಣುಮಕ್ಕಳು ಸ್ನಾನಕ್ಕೆ ಮತ್ತು ಬಟ್ಟೆ ಒಗೆಯಲೆಂದು ಭೀಮನಾಡಿನ ಹೊಂಡಕ್ಕೆ ತೆರಳಿದ್ದರು.
ಇದನ್ನೂ ಓದಿ:ಭಾರತದಲ್ಲಿನ ಕ್ರಿಕೆಟ್​ ಸರಣಿಗಳ ಪ್ರಸಾರ ಹಕ್ಕು ಮಾರಾಟ ಇಂದು; ಜಾಕ್​ಪಾಟ್​ ನಿರೀಕ್ಷೆಯಲ್ಲಿ ಬಿಸಿಸಿಐ
ಈ ವೇಳೆ ಸಹೋದರಿಯೊಬ್ಬಳು ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದಿದ್ದಾಳೆ. ಅಲ್ಲಿಯೇ ಇದ್ದ ಇನ್ನಿಬ್ಬರು ಸಹೋದರಿಯರು ಆಕೆಯನ್ನು ಉಳಿಸಲೆಂದು ಕೆರೆಗೆ ಹಾರಿದರು. ಆದರೆ ಪ್ರಯತ್ನ ವ್ಯರ್ಥವಾಯಿತು. ಮೂವರು ಸಹ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಣ್ಣೆದುರಲ್ಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಕಂಡು ಬೆಚ್ಚಿಬಿದ್ದ ತಂದೆ ಆ ಬಗ್ಗೆ ಮಾತನಾಡಲು ಕಷ್ಟಪಟ್ಟರು.
ತನ್ನ ಮಕ್ಕಳನ್ನು ರಕ್ಷಿಸಲು ತಂದೆಯ ಹತಾಶ ಪ್ರಯತ್ನವನ್ನು ನೋಡಿ, ಹತ್ತಿರದಲ್ಲಿದ್ದ ವಲಸೆ ಕಾರ್ಮಿಕರು, ಸ್ಥಳೀಯರಿಗೆ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ ತಡವಾಗಿತ್ತು. ನಿರ್ಜನ ಪ್ರದೇಶವಾಗಿದ್ದರಿಂದ ರಕ್ಷಣೆಯೂ ವಿಳಂಬವಾಯಿತು. ಸ್ಥಳೀಯರು ಮೂವರು ಸಹೋದರಿಯರನ್ನು ಹೊರತೆಗೆದು ಮನ್ನಾರ್ಕಾಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.(ಏಜೆನ್ಸೀಸ್​)
ನಾವಿಕನಿಲ್ಲದ ದೋಣಿಯಂತಾಗಿರುವ ಪ್ರತಿಪಕ್ಷ ಬಿಜೆಪಿ: ನಾಯಕತ್ವ ಆಯ್ಕೆ ನನೆಗುದಿ, ಚಟುವಟಿಕೆಗಳಿಗೆ ಬೇಗುದಿ; ಸಂಘಟನಾತ್ಮಕ ಪ್ರವಾಸ, ಹೋರಾಟಗಳು ಮುಂದೂಡಿಕೆ

ಭಯದ ಲಕ್ಷಣವೇನು, ನಿವಾರಣೆ ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + sixteen =
Remember me
