ಹೈದರಾಬಾದ್​:ಒಂದೇ ಕುಟುಂಬದ ಮೂವರು ಹುಡುಗಿಯರು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ವನಸ್ಥಲಿಪುರಂನಲ್ಲಿ ನಡೆದಿದ್ದು, ಸ್ಥಳೀಯ ಜನತೆಯನ್ನು ಆತಂಕಕ್ಕೆ ದೂಡಿದೆ.
ಮೂವರು ಸಹ ಸಹೋದರಿಯರಾಗಿದ್ದು, 17, 15 ಮತ್ತು 14 ವಯಸ್ಸಿನ ಹೆಣ್ಣು ಮಕ್ಕಳೆಂದು ತಿಳಿದುಬಂದಿದೆ. ಮೂವರು ಸಹ ಪ್ರಗತಿ ನಗರದಲ್ಲಿ ತಮ್ಮ ಪಾಲಕರೊಂದಿಗೆ ವಾಸವಿದ್ದರು.
ಇದನ್ನೂ ಓದಿರಿ:ಐಪಿಎಲ್​ ಇತಿಹಾಸದಲ್ಲಿ ಈವರೆಗೂ ಎಂ.ಎಸ್​. ಧೋನಿ ಎಷ್ಟು ಭಾರಿ ಡಕ್​ ಔಟ್​ ಆಗಿದ್ದಾರೆ?
ಶುಕ್ರವಾರ ಮನೆಯ ಹಿರಿಯ ಮಗಳು ಮತ್ತು ತಾಯಿಯ ನಡುವೆ ಜಗಳ ನಡೆದಿದೆ. ಈ ವೇಳೆ ಉಳಿದ ಇಬ್ಬರು ಸಹ ತನ್ನ ಸಹೋದರಿಯ ಬೆಂಬಲಕ್ಕೆ ನಿಂತು ತಾಯಿಯೊಂದಿಗೆ ಜಗಳ ಆಡಿದ್ದಾರೆಂದು ತಿಳಿದುಬಂದಿದೆ. ಆದರೆ, ಯಾವ ವಿಚಾರಕ್ಕೆ ಜಗಳ ನಡೆದಿದೆ ಎಂಬುದು ತಿಳಿದುಬಂದಿಲ್ಲ.
ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ ಸಹೋದರಿಯರು ಶನಿವಾರ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮನೆಯಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯಾರು ಸಹ ಪತ್ತೆಯಾಗಲಿಲ್ಲ. ಕೊನೆಗೆ ಕುಟುಂಬ ವನಸ್ಥಲಿಪುರಂ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಬದುಕಿನ ನಾಯಕ ನೀವೇ ಆಗಿರಿ…: ಸೆಲೆಬ್ರಿಟಿ ಕಾರ್ನರ್​ನಲ್ಲಿ ರವಿ ಡಿ. ಚನ್ನಣ್ಣನವರ್​

ಕರೊನಾ ಸೋಂಕಿಗೆ ಯುವ ವೈದ್ಯ ಬಲಿ: ಮದುವೆಯಾದ ಒಂದೇ ವರ್ಷದಲ್ಲಿ ದುರಂತ ಸಾವು

ಅಲಿಬಾಬಾಗೆ 20,551 ಕೋಟಿ ಡಾಲರ್ ದಂಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × five =
Remember me
