ಶಾರ್ಜಾ:‘———- ಈಸ್​ ದ ಸೀಕ್ರೆಟ್ ಆಫ್​ ಮೈ ಎನರ್ಜಿ’ ಅಂತ ಒಬ್ಬೊಬ್ಬರು ತಮ್ಮ ಶಕ್ತಿಯ ಹಿಂದಿನ ರಹಸ್ಯದ ಕುರಿತು ಒಂದೊಂದು ವಸ್ತು ಅಥವಾ ವಿಷಯವನ್ನು ಹೇಳುತ್ತಾರೆ. ಹಾಗೆಯೇ ಪಂದ್ಯವನ್ನು ಗೆಲ್ಲಿಸುವಂತೆ ಅದ್ಭುತವಾಗಿ ಆಟವಾಡಿದ ಕ್ರಿಕೆಟ್​ ಪಟುವೊಬ್ಬರು ತಮ್ಮ ಆಟದ ಹಿಂದಿನ ರಹಸ್ಯವನ್ನು ಹೊರಗೆಡಹಿದ್ದಾರೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಮೆನ್ಸ್ ಟಿ-20 ಚಾಲೆಂಜ್ ಕಪ್​ನಲ್ಲಿ ಶನಿವಾರ ಟ್ರೈಲ್​ ಬ್ಲೇಜರ್ಸ್ ತಂಡದ ವಿರುದ್ಧ ಅದ್ಭುತವಾಗಿ ಆಡಿ ಸೂಪರ್​ನೋವಾಸ್ ತಂಡದ ರೋಚಕ ಗೆಲುವಿಗೆ ಕಾರಣವಾದ ಚಾಮರಿ ಅಟಪಟ್ಟು, ತನ್ನ ಭರ್ಜರಿ ಹೊಡೆತದ ಹಿಂದಿನ ಶಕ್ತಿಯ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.
ಸೂಪರ್ ನೋವಾಸ್ ತಂಡದ ಚಾಮರಿ ಅಟಪಟ್ಟು 48 ಎಸೆತಗಳಲ್ಲಿ 67 ರನ್ ಪೇರಿಸಿದ್ದರು. ಇವುಗಳಲ್ಲಿ ಐದು ಬೌಂಡರಿ ನಾಲ್ಕು ಸಿಕ್ಸರ್​ಗಳಿಸಿ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದ್ದಾರೆ. ಇವರ ಈ ಭರ್ಜರಿ ಆಟದಿಂದ ತಂಡ 6 ವಿಕೆಟ್​ಗೆ 146 ರನ್ ಪೇರಿಸಿತ್ತು. ಹೀಗೆ ತನ್ನ ಆಟದ ಹಿಂದಿನ ರಹಸ್ಯದ ಬಗ್ಗೆ ತಂಡದವರ ಜತೆ ಮಾತನಾಡುತ್ತ ಹೇಳಿದ ರಹಸ್ಯ, ವಿಡಿಯೋ ತುಣುಕೊಂದರಲ್ಲಿ ಬಹಿರಂಗಗೊಂಡಿದೆ.‘ಮೂರು ಮಸಾಲೆದೋಸೆ ಹಾಗೂ ಮಸಾಲಾ ಆಮ್ಲೆಟ್​ ನನ್ನ ಭರ್ಜರಿ ಹೊಡೆತದ ಹಿಂದಿನ ರಹಸ್ಯ’ ಎಂದು ಚಾಮರಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
