ನಾಗ್ಪುರ:ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆಯಾಗಿರುವ ದುರದೃಷ್ಟಕರ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿನ ನಡೆದಿದೆ.ತೌಫಿಕ್ ಫಿರೋಜ್ ಖಾನ್(4), ಅಲಿಯಾ ಫಿರೋಜ್ ಖಾನ್(6) ಮತ್ತು ಅಫ್ರೀನ್ ಇರ್ಷಾದ್ ಖಾನ್(6) ಎಂಬ ಮಕ್ಕಳು ಮನೆಯ ಶನಿವಾರದಂದು ಆಟವಾಡಲು ಹೋಗಿದ್ದರು. ತಡರಾತ್ರಿಯಾದರೂ ಮಕ್ಕಳು ವಾಪಸ್ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ಹುಡುಕಾಟ ಆರಂಭಿಸಿದ್ದರು. ಕೊನೆಗೆ ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ ಪಂಚಪಾವಲಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.ಇದನ್ನೂ ಓದಿ:VIDEO| ಯುವಕನ ಕತ್ತಿಗೆ ನಾಯಿಬೆಲ್ಟ್​ ಕಟ್ಟಿ ಕ್ಷಮೆಯಾಚಿಸುವಂತೆ ಹಿಂಸೆವಿಷಯದ ಗಂಭೀರತೆಯನ್ನು ಕಂಡ ಪೊಲೀಸರು ಮಕ್ಕಳಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದರು. ಆದರೆ ಎರಡು ದಿನ ಹುಡುಕಿದರೂ ಮಕ್ಕಳು ದೊರೆತಿರಲಿಲ್ಲ. ಆದರೆ ಇಂದು ಮನೆ ಸಮೀಪದ ಗುಜರಿ ಅಂಗಡಿಯಲ್ಲಿ ನಿಲ್ಲಿಸಿದ್ದ ಹಳೆಯ ಕಾರಿನೊಳಗೆ ಈ ಮೂವರ ಮೃತದೇಹಗಳು ಪತ್ತೆಯಾಗಿವೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ.ಘಟನೆ ಕುರಿತು ಮಾತನಾಡಿದ ಪೊಲೀಸರು, ಮೂವರು ಮಕ್ಕಳು ಆಟವಾಡುತ್ತಾ ಕಾರಿನಲ್ಲಿ ಕುಳಿತು ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ಮೂರು ಮಕ್ಕಳು ಕಾರಿನ ಒಳಗಿನ ತಾಪಮಾನ ಮತ್ತು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ. ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
