ಉತ್ತರಾಖಂಡ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮೇನಲ್ಲಿ ಉತ್ತರಾಖಂಡದ ರುದ್ರ ಗುಹೆಯಲ್ಲಿ ಧ್ಯಾನ ಮಾಡಿದ್ದು, ಆ ಬಳಿಕ ಆ ಸ್ಥಳ ಜನಪ್ರಿಯವಾಗಿದ್ದೆಲ್ಲ ಈಗ ಹಳೆಯ ವಿಷಯ. ಆದರೆ ಹೊಸ ವಿಚಾರ ಏನೆಂದರೆ ಆ ಸ್ಥಳದಲ್ಲೀಗ ಹೊಸದಾಗಿ ಮೂರು ಗುಹೆಗಳಾಗಿವೆ!
ಮೋದಿ ಧ್ಯಾನ ಮಾಡಿದ ಬಳಿಕ ಆ ಗುಹೆ ಇರುವ ಕೇದಾರನಾಥದ ಸಮೀಪದ ಸ್ಥಳವು ಭಾರಿ ಜನಪ್ರಿಯತೆ ಪಡೆದಿದೆ. ಅಲ್ಲಿ ಮತ್ತಷ್ಟು ಗುಹೆಗಳನ್ನು ನಿರ್ಮಿಸಲಾಗವುದು ಎಂದು ಅಲ್ಲಿನ ಸರ್ಕಾರ ಘೋಷಿಸಿತ್ತು. ಅದರಂತೆ ಈಗ ಅಲ್ಲಿ ಮೂರು ಹೊಸ ಗುಹೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಉತ್ತರಾಖಂಡದ ಸರ್ಕಾರ ಬುಧವಾರ ಪ್ರಕಟಿಸಿದೆ. ಆ ಗುಹೆಗಳನ್ನು ಗರ್ವಾಲ್ ಮಂಡಲ್​ ವಿಕಾಸ್​ ನಿಗಮಕ್ಕೆ ನವೆಂಬರ್ 11ರಂದು ಹಸ್ತಾಂತರಿಸಲಾಗುವುದು ಎಂದೂ ಸರ್ಕಾರ ಹೇಳಿದೆ.
ಕಳೆದ ವರ್ಷದ ಮೇನಲ್ಲಿ ಕೇದಾರನಾಥ ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿನ ರುದ್ರ ಗುಹೆಯಲ್ಲಿ ಮೋದಿ ಒಂದಿಡೀ ದಿನ ಧ್ಯಾನನಿರತರಾಗಿದ್ದರು. ಆ ಮೂಲಕ ಸ್ವಚ್ಛ ಹಾಗೂ ಸುರಕ್ಷಿತ ಚಾರ್ ಧಾಮ್​ ಯಾತ್ರೆಯ ಸಂದೇಶ ರವಾನಿಸಿದ್ದರು. ಬಳಿಕ ಕಳೆದ ವರ್ಷದ ಆರು ತಿಂಗಳ ಅವಧಿಯಲ್ಲಿ ಹಿಂದೆಂದೂ ಬರದಷ್ಟು ಯಾತ್ರಿಕರು ಚಾರ್​ ಧಾಮ್​ಗೆ ಭೇಟಿ ನೀಡಿದ್ದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 18 =
Remember me
