ಉತ್ತರಪ್ರದೇಶ:ವಂದೇ ಭಾರತ್​ ರೈಲು ಡಿಕ್ಕಿ ಹೊಡೆದ ಕಾರಣ ತಮ್ಮ ಮೇಕೆಗಳು ಬಲಿಯಾಯಿತು ಎಂದು ಸೇಡು ತೀರಿಸಿಕೊಳ್ಳಲು ಮೂವರು ರೈಲಿಗೆ ಕಲ್ಲು ತೂರಿರುವ ಘಟನೆ ಆಯೋಧ್ಯೆಯಲ್ಲಿ ವರದಿಯಾಗಿದೆ.
ಮಂಗಳವಾರ(ಜುಲೈ 11) ಅಯೋಧ್ಯೆ ಮೂಲಕ ಹಾದುಹೋಗುವ ನೂತನವಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಮೂವರನ್ನು ಇದೀಗ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಜುಲೈ 9 ರಂದು ಆರು ಮೇಕೆಗಳು ರೈಲಿಗೆ ಸಿಲುಕಿ ಸಾವಿಗೀಡಾಯಿತು. ಇದೇ ಕಾರಣವನ್ನು ಮುಂದಿಟ್ಟುಕೊಂಡ ಮುನು ಪಾಸ್ವಾನ್ ಮತ್ತು ಅವರ ಇಬ್ಬರು ಮಕ್ಕಳಾದ ಅಜಯ್ ಮತ್ತು ವಿಜಯ್ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿ, ಮೂವರು ರೈಲಿಗೆ ಕಲ್ಲು ತೂರಿದ್ದಾರೆ.
ಮೂನು ಪಾಸ್ವಾನ್ ಮತ್ತು ಅವರ ಇಬ್ಬರು ಮಕ್ಕಳು ಅಜಯ್ ಮತ್ತು ವಿಜಯ್ ಸೇರಿದಂತೆ ಮೂವರನ್ನು ಸದ್ಯ ಬಂಧಿಸಲಾಗಿದೆ. ಜುಲೈ 9 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೂನು ಪಾಸ್ವಾನ್‌ ಅವರಿಗೆ ಸೇರಿದ ಆರು ಮೇಕೆಗಳು ರೈಲಿಗೆ ಸಿಲುಕಿ ಸಾವನ್ನಪಿದವು. ಅವುಗಳ ನಷ್ಟದಿಂದ ಕೋಪಗೊಂಡ ಮೂವರು ಇಂದು ರೈಲಿನ ಮೇಲೆ ಕಲ್ಲು ತೂರಿದ್ದಾರೆ ಎಂದು ಅಯೋಧ್ಯೆಯ ಎಸ್ಎಸ್ಪಿ ರಾಜ್ ಕರಣ್ ನಯ್ಯರ್ ಹೇಳಿದ್ದಾರೆ,(ಏಜೆನ್ಸೀಸ್).

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 2 =
Remember me
