ನವದೆಹಲಿ:ಪೂರ್ವ ಲಡಾಖ್​ನ ಎಲ್​ಎಸಿ ಗಡಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿರುವ ತಿಕ್ಕಾಟವನ್ನು ಕೊನೆಗೊಳಿಸಲು ಭಾರತೀಯ ಸೇನೆ ಹಾಗೂ ಚೀನಾ ಸೇನೆ ಸಹಮತಕ್ಕೆ ಬಂದಿವೆ ಎಂದು ಸೇನೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ಮೇ ತಿಂಗಳಿನಲ್ಲಿ ವಿವಾದವೇರ್ಪಟ್ಟಿದ್ದ ಪ್ರದೇಶವನ್ನು ಮೂರು ಹಂತಗಳಲ್ಲಿ ತೊರೆಯಲು ಉಭಯ ಸೇನಾಪಡೆಗಳು ಒಪ್ಪಿಗೆ ಸೂಚಿಸಿವೆ. ನವೆಂಬರ್ 6ರಂದು ಚುಶುಲ್​ನಲ್ಲಿ ನಡೆದ ಕೋರ್ ಕಮಾಂಡರ್ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ ಏಪ್ರಿಲ್ ವೇಳೆ ಉಭಯ ಪಡೆಗಳು ಯಾವ್ಯಾವ ಪ್ರದೇಶಗಳಲ್ಲಿದ್ದವೋ ಅಲ್ಲಿಗೆ ಮರಳಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾತ್ಸವ ಮತ್ತು ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಬ್ರಿಗೇಡಿಯರ್ ಘಾಯ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದಾಗ್ಯೂ ಈ ಕುರಿತು ಅಧಿಕೃತವಾಗಿ ಉಭಯ ಸೇನೆಗಳು ಯಾವುದೇ ಲಿಖಿತ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಎಲ್​ಎಸಿಯ ವಿವಾದಿತ ಪ್ರದೇಶದಿಂದ ಉಭಯ ಸೇನೆಗಳು ಮುಂದಿನ ವಾರ 3 ಹಂತಗಳಲ್ಲಿ ಯುದ್ಧ ಟ್ಯಾಂಕ್​ಗಳು, ಶಸ್ತ್ರಸಜ್ಜಿತ ವಾಹನಗಳು ಹಾಗೂ ಸೇನಾಪಡೆಗಳನ್ನು ಹಿಂಪಡೆಯಲಿವೆ.
1ನಿರ್ಣಯದ ಪ್ರಕಾರ ಮುಂದಿನ ವಾರ ಮೊದಲ ಹಂತದಲ್ಲಿ ಟ್ಯಾಂಕ್​ಗಳು ಹಾಗೂ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಮುಂಚೂಣಿ ನೆಲೆಯಿಂದ ಉಭಯ ಪಡೆಗಳು ಹಿಂಪಡೆಯಬೇಕಾಗುತ್ತದೆ. ಗಲ್ವಾನ್ ಕಣಿವೆಯಲ್ಲಿನ ಸಂಘರ್ಷದ ಬಳಿಕ ಶಸ್ತ್ರಸಜ್ಜಿತ ಸೇನಾಪಡೆಗಳನ್ನು ಉಭಯ ದೇಶಗಳು ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಿದ್ದು, ಇವರನ್ನು ವಾಪಸ್ ಕರೆಸಿಕೊಳ್ಳಬೇಕಾಗುತ್ತದೆ.
2ಎರಡನೇ ಹಂತದಲ್ಲಿ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ತೀರದ ಬಳಿಯಲ್ಲಿ ಜಮಾವಣೆಯಾಗಿರುವ ಸೈನಿಕರನ್ನು 3 ದಿನಗಳ ಕಾಲ ಪ್ರತಿದಿನ ಶೇ. 30ರಷ್ಟಂತೆ ವಾಪಸ್ ಕರೆಸಿಕೊಳ್ಳಬೇಕಾಗುತ್ತದೆ. ಇದರ ಅನ್ವಯ ಚೀನಾದ ಸೈನಿಕರು ಫಿಂಗರ್ 8ರ ಪೂರ್ವಕ್ಕೆ ಹಿಂದಿರುಗಲಿದ್ದು, ಭಾರತೀಯ ಸೈನಿಕರು ಧನ್​ಸಿಂಗ್ ಥಾಪಾ ಪೋಸ್ಟ್​ಗೆ ಮರಳಲಿದ್ದಾರೆ.
3ಮೂರನೇಯ ಮತ್ತು ಕೊನೆ ಹಂತದಲ್ಲಿ ಚುಂಗುಲ್ ಮತ್ತು ರೆಜಾಂಗ್ ಲಾ ಪ್ರದೇಶದ ಸುತ್ತಮುತ್ತಲಿನ ಎತ್ತರದ ಪ್ರದೇಶಗಳು ಹಾಗೂ ಪ್ಯಾಂಗೊಂಗ್ ತ್ಸೊ ಸರೋವರದ ದಕ್ಷಿಣ ತೀರದ ಬಳಿಯಲ್ಲಿ ನಿಯೋಜಿಸಲಾಗಿರುವ ಸೈನಿಕರನ್ನು ಹಿಂಪಡೆಯಬೇಕಾಗುತ್ತದೆ.
ಗಲ್ವಾನ್ ಕಣಿವೆ ವಿವಾದದ ಹಾದಿ* ಮೇ 5 ರಂದು ಪೂರ್ವ ಲಡಾಖ್​ನಲ್ಲಿ ಉಭಯ ದೇಶಗಳ ಸುಮಾರು 200 ಸೈನಿಕರು ಮುಖಾಮುಖಿಯಾಗಿ, ಕೈಕೈ ಮಿಲಾಯಿಸಿದ್ದರು.* ಮೇ 9 ರಂದು ಉತ್ತರ ಸಿಕ್ಕಿಂನಲ್ಲಿ ಉಭಯ ಕಡೆಗಳ 150 ಸೈನಿಕರು ಮಧ್ಯೆ ಘರ್ಷಣೆ ನಡೆದಿತ್ತು. * ಚೀನಾ ಲಡಾಖ್ ಗಡಿಗೆ ಹೆಲಿಕಾಪ್ಟರ್​ಗಳನ್ನು ಕಳುಹಿಸುವ ಮೂಲಕ ಪರಿಸ್ಥಿತಿಯ ಕಾವನ್ನು ಏರಿಸಿತು.* ಬಳಿಕ ಉಭಯ ಸೇನೆಗಳ ಅಧಿಕಾರಿಗಳ ಮಾತುಕತೆಯ ಅನ್ವಯ ವಿವಾದಿತ ಪ್ರದೇಶದಿಂದ ಎರಡೂ ಸೇನೆಗಳು ಹಿಂದಿರುಗಲು ಒಪ್ಪಿದವು.* ಮಾತುಕತೆಯ ಅನ್ವಯ ಚೀನಾ ಸೇನೆ ಹಿಂದಿರುಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಜೂನ್ 15ರಂದು ಭಾರತದ ಕರ್ನಲ್ ನೇತೃತ್ವದ ಪಡೆ ತೆರಳಿತ್ತು.* ಚೀನಾದ ಒಂದು ಟೆಂಟ್ ತೆರವುಗೊಳಿಸುವ ಸಂಬಂಧ ಉಭಯ ಸೈನಿಕರ ಮಧ್ಯೆ ಸಂಘರ್ಷವೇರ್ಪಟ್ಟು, ರಾತ್ರಿಯಿಡಿ ಸೈನಿಕರು ಬಡಿದಾಡಿಕೊಂಡರು.* ಭೀಕರ ಮಾರಾಮಾರಿಯಲ್ಲಿ ಭಾರತ ಕರ್ನಲ್ ಸೇರಿ 20 ಸೈನಿಕರು ಹುತಾತ್ಮರಾದರು. ಚೀನಾದ ಕಡೆಯಲ್ಲೂ ಅಪಾರ ಸಾವು-ನೋವು ಸಂಭವಿಸಿದ್ದು, ಅವರು ಅದರ ಮಾಹಿತಿಯನ್ನು ರಹಸ್ಯವಾಗಿಟ್ಟರು.
ಡ್ರೋನ್​ಗಳ ಮೂಲಕ ಪರಿಶೀಲನೆಮೂರು ಹಂತಗಳ ಒಪ್ಪಂದ ಅನ್ವಯ ಸೇನೆ ಹಿಂಪಡೆಯುವಿಕೆಯನ್ನು ಉಭಯ ಪಡೆಗಳು ಡ್ರೋನ್​ಗಳ ಮೂಲಕ ಪರಿಶೀಲನೆ ನಡೆಸುವ ಜಂಟಿ ಕಾರ್ಯವಿಧಾನಕ್ಕೆ ಸಮ್ಮತಿ ಸೂಚಿಸಿವೆ. ಈ ಯೋಜನೆಯು ಕಳೆದ ಜೂನ್​ನಲ್ಲಿ ಉಭಯ ಪಡೆಗಳ ಮಧ್ಯೆ ನಡೆದ ಮುಖಾಮುಖಿಯಂತಹ ಉದ್ವಿಗ್ನತೆ ಮರುಕಳಿಸದಿರುವಂತೆ ತಡೆಯಲು ಸಹಾಯಕವಾಗಲಿದೆ.
ಒಪ್ಪಂದದ ಹೊರತಾಗಿಯೂ ಭಾರತ ಸನ್ನದ್ಧಚೀನಾ ಪದೇ ಪದೆ ಮಾತು ತಪ್ಪಿ ಗಡಿಯಲ್ಲಿ ಕ್ಯಾತೆ ತೆಗೆಯುವ ಕುತಂತ್ರ ಬುದ್ಧಿ ತೋರಿಸುವುದರಿಂದಾಗಿ ಭಾರತೀಯ ಸೇನೆ ಹೆಚ್ಚು ಜಾಗರೂಕವಾಗಿದೆ. ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಭಾರತೀಯ ಸೇನೆ ಸಂಭಾವ್ಯ ಸಂಘರ್ಷಗಳಿಗೂ ಸನ್ನದ್ಧವಾಗಿದೆ ಎಂದು ತಿಳಿದುಬಂದಿದೆ.
ವಿದೇಶಿ ದೇಣಿಗೆ ನಿಯಮ ಬಿಗಿ: ಪರಿಷ್ಕೃತ ನಿಬಂಧನೆ ಪಾಲಿಸಬೇಕು ಎನ್​ಜಿಒಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
