ನವದೆಹಲಿ:ನೀತಿ ಆಯೋಗವು ಇದೇ ಮೊದಲ ಬಾರಿಗೆ ಬಹು ಆಯಾಮ ಬಡತನ ಸೂಚ್ಯಂಕ (ಎಂಪಿಐ) ವರದಿ ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮೇಘಾಲಯಗಳು ಬಡವರ ಸಂಖ್ಯೆ ಹೆಚ್ಚು ಇರುವ ರಾಜ್ಯಗಳೆಂದು ಗುರುತಿಸಲ್ಪಟ್ಟಿವೆ. ಬಿಹಾರದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರಮಾಣ ಕೂಡ ಅಧಿಕವಾಗಿದ್ದು, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್​ಗಢಗಳು ನಂತರದ ಸ್ಥಾನಗಳಲ್ಲಿ ಇವೆ. ಬಾಣಂತಿ ಆರೋಗ್ಯ, ಶಾಲಾ ಕಲಿಕಾ ಅವಧಿ, ಶಾಲಾ ಹಾಜರಾತಿ, ಅಡುಗೆ ಇಂಧನ ಮತ್ತು ವಿದ್ಯುತ್ ಸೌಕರ್ಯ ಪಡೆದ ಪ್ರಮಾಣದಲ್ಲೂ ಬಿಹಾರ ಕಡೆಯ ಸ್ಥಾನದಲ್ಲಿ ಇದೆ.
ಎಂಪಿಐ ಮಾನದಂಡ ಏನು?:ಬಡತನವನ್ನು ಬಹು ಆಯಾಮದಲ್ಲಿ ಅಳೆಯಲು ಜಾಗತಿಕವಾಗಿ ಒಪ್ಪಿತವಾಗಿರುವ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ಮತ್ತು ಆಕ್ಸ್ ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (ಒಪಿಎಚ್​ಐ)ವನ್ನು ಅನುಸರಿಸಿ ಎಂಪಿಐ ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ತಿಳಿಸಿದೆ.
ಅಧ್ಯಯನದಲ್ಲಿ ಬಡತನದ ಜತೆಗೆ, ಆರೋಗ್ಯ, ಶಿಕ್ಷಣ, ಜೀವನ ಮಟ್ಟಕ್ಕೂ ಒತ್ತು ನೀಡಲಾಗಿದೆ. 12 ಅಂಶಗಳಲ್ಲಿ ಇವುಗಳನ್ನು ವರ್ಗೀಕರಿಸಲಾಗಿದೆ. ಪೌಷ್ಟಿಕತೆ, ಮಗು ಮತ್ತು ಹದಿಹರಯದ ಮಕ್ಕಳ ಮರಣ, ಗರ್ಭಿಣಿ ಮತ್ತು ಬಾಣಂತಿ ಆರೈಕೆ, ಶಾಲಾ ಕಲಿಕಾ ಅವಧಿ, ಶಾಲಾ ಹಾಜರಾತಿ, ಬಳಕೆ ಮಾಡುತ್ತಿರುವ ಅಡುಗೆ ಇಂಧನ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಮನೆಯ ವಿದ್ಯುತ್ ಸಂಪರ್ಕ, ಆಸ್ತಿ ಮತ್ತು ಬ್ಯಾಂಕ್ ಖಾತೆ ಹೊಂದಿರುವಿಕೆ.

ಎಂಪಿಐ ಮಾದರಿಯನ್ನು ಇದೇ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಲಾಗಿದೆ. ಎಂಪಿಐ ದೇಶದ ಬಡತನವನ್ನು ಬಹುಆಯಾಮದಲ್ಲಿ ಮೇಲ್ವಿಚಾರಣೆ ಮಾಡುವ, ಸಾಕ್ಷ್ಯಾಧಾರಿತವಾಗಿ ಮತ್ತು ಕೇಂದ್ರೀಕೃತವಾಗಿ ಮಾಹಿತಿ ನೀಡುವ ಸಾರ್ವತ್ರಿಕ ಸಾಂಸ್ಥಿಕ ಸಾಧನವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾರೂ ಹೊರಗೊಳಿಯದಂತೆ ನೋಡಿಕೊಳ್ಳಲಾಗಿದೆ. ಇದರಿಂದ ಸರ್ಕಾರಕ್ಕೆ ಭವಿಷ್ಯದ ನೀತಿ ರೂಪಿಸಲು ಸಹಾಯ ಆಗುತ್ತದೆ.
|ರಾಜೀವ್ ಕುಮಾರ್ನೀತಿ ಆಯೋಗದ ಉಪಾಧ್ಯಕ್ಷ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 4 =
Remember me
