ಬೆಂಗಳೂರು:ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಹಾಗೂ ಪೋಷಣ್ 2.0 ಅಭಿಯಾನ ಸೇರಿ 3 ಯೋಜನೆ ಜಾರೊಗೊಳಿಸಿದ್ದು, ಇದು ಕೇಂದ್ರದ 18 ಸಚಿವಾಲಯಗಳನ್ನು ಒಳಗೊಂಡಿದೆ ಎಂದು ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರ ಅಭಿವೃದ್ಧಿ ಆಗದ ಹೊರತು ದೇಶ ಅಭಿವೃದ್ಧಿ ಆಗುವುದಿಲ್ಲವೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಹೀಗಾಗಿ ಕೇಂದ್ರದ ಬಜೆಟ್​ನಲ್ಲಿ ಶೇ.14 ಅನುದಾನವನ್ನು ಮಹಿಳೆಯ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ದೃಷ್ಟಿಕೋನದಿಂದ ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಹಾಗೂ ಪೋಷಣ್ 2.0 ಆರಂಭಿಸಲಾಗಿದೆ. ಪೋಷಣ್ ಅಭಿಯಾನ ಮೊದಲ ಹಂತದ ಸೇವೆ ನೀಡುವ 14 ಅಂಗನವಾಡಿ ಶಾಲೆಗಳಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಈಗಾಗಲೆ 11 ಲಕ್ಷ ಅಂಗನವಾಡಿಗಳು ಸ್ಮಾರ್ಟ್ ಡಿವೈಸ್ ಅಳವಡಿಕೆಯೊಂದಿಗೆ ಮೇಲ್ದರ್ಜೆಗೆ ಏರಿಕೆಯಾಗಿವೆ. ಮಕ್ಕಳು ಮತ್ತು ಮಹಿಳೆಯರು ಸೇರಿ 9 ಕೋಟಿ ಫಲಾನುಭವಿಗಳು ಪೋಷಣ್ ಅಭಿಯಾನದ ಲಾಭ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಖಾತೆ ಸಚಿವ ಡಾ. ಮುಂಜ್ಪಾರಾ ಮಹೇಂದ್ರಭಾಯಿ, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಕಾರ್ಯದರ್ಶಿ ಇಂದೇವರ್ ಪಾಂಡೆ ಉಪಸ್ಥಿತರಿದ್ದರು.
ಜನ್​ಧನ್ ಖಾತೆ ತೆರೆದ 24 ಕೋಟಿ ಮಹಿಳೆಯರು:ದೇಶದಲ್ಲಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದ್ದು, ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಬೇಕೆಂಬ ಆಶಯದಿಂದ ಪ್ರಧಾನಿ ನರೇಂದ್ರ ಮೋದಿ ‘ಜನಧನ್’ ಯೋಜನೆ ಆರಂಭಿಸಿದರು. ಈಗ ದೇಶದೆಲ್ಲೆಡೆ 24 ಕೋಟಿ ಮಹಿಳೆಯರು ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಉದ್ದಿಮೆ ಆರಂಭಿಸಲು ಸ್ಥಾಪಿಸಲಾಗಿದ್ದ ಮುದ್ರಾ ಯೋಜನೆಯಡಿ 32 ಕೋಟಿ ರೂ. ಸಾಲ ನೀಡಲಾಗಿದ್ದು, ಈ ಪೈಕಿ ಶೇ.68 ಮಹಿಳೆಯರಿದ್ದಾರೆ. ಸಖೀ ಯೋಜನೆಯಡಿ 8 ಕೋಟಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬ್ಯಾಂಕ್​ಗಳಿಂದ ನೆರವು ನೀಡಲಾಗಿದೆ ಎಂದು ಸ್ಮೃತಿ ಇರಾನಿ ತಿಳಿಸಿದರು.
ಜಿಲ್ಲೆಗೊಂದು ಸಹಾಯ ಕೇಂದ್ರ:ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ಮತ್ತು ಪರಿಹಾರ ಒದಗಿಸಲು ಜಿಲ್ಲೆಗೊಂದರಂತೆ ಮಹಿಳಾ ಸಹಾಯ ಕೇಂದ್ರ (ಒನ್ ಸ್ಟಾಪ್ ಸೆಂಟರ್) ಸ್ಥಾಪಿಸಲಾಗುತ್ತದೆ. ಇಲ್ಲಿ ಮಹಿಳಾ ಸಂಬಂಧಿತ ದೂರು, ನ್ಯಾಯಾಲಯದ ವ್ಯಾಜ್ಯ, ಕಾನೂನು ಸಲಹೆ ಹಾಗೂ ನೆರವು ಕೇಂದ್ರಗಳ ಬಗ್ಗೆ ಮಾಹಿತಿ ಸಿಗಲಿದೆ. ಈಗಾಗಲೆ 704 ಮಹಿಳಾ ಸಹಾಯ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಬಲಪಡಿಸಲಾಗುವುದು. ಮಕ್ಕಳು ಮತ್ತು ಮಹಿಳಾ ಸಹಾಯವಾಣಿಯನ್ನು ಒನ್​ಸ್ಟಾಪ್ ಸೆಂಟರ್​ಗೆ ಜೋಡಣೆ ಮಾಡಲಾಗುತ್ತದೆ. ದೇಶದಲ್ಲಿನ ಮಹಿಳಾ ಸಹಾಯ ಕೇಂದ್ರಗಳಿಂದ 70 ಲಕ್ಷ ಮಹಿಳೆಯರಿಗೆ ನೆರವು ದೊರೆತಿದೆ. ದೇಶದಲ್ಲಿ 918 ಇದ್ದ ಲಿಂಗಾನುಪಾತ ಪ್ರಮಾಣ 937 ಏರಿಕೆಯಾಗಿದೆ ಎಂದು ಸ್ಮೃತಿ ಇರಾನಿ ತಿಳಿಸಿದರು.
ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

ಪಲ್ಟಿಯಾದ ಕಾರು, ತಂದೆ-ಮಗ ಸ್ಥಳದಲ್ಲೇ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 9 =
Remember me
