ನವದೆಹಲಿ:ಒಂದೇ ಬಾವಿಯಲ್ಲಿ ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಸೇರಿ ಒಟ್ಟು ಐದು ಮೃತದೇಹಗಳು ಪತ್ತೆಯಾಗಿವೆ. ಈ ಮೂವರೂ ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಇದೀಗ ಪ್ರಕರಣ ಕುತೂಹಲ ಕೆರಳಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ರಾಜಸ್ಥಾನದ ಜೈಪುರ ಜಿಲ್ಲೆಯ ದುದು ಎಂಬ ಪ್ರದೇಶದ ಸಮೀಪ ಈ ಪ್ರಕರಣ ನಡೆದಿದೆ. ಕಲು ಮೀನ (25), ಮಮತಾ ಮೀನ (23), ಕಮ್ಲೇಶ್ ಮೀನ (20) ಶವವಾಗಿ ಪತ್ತೆಯಾಗಿರುವ ಸಹೋದರಿಯರು. ಇನ್ನು ಶವವಾಗಿ ಪತ್ತೆಯಾಗಿರುವ ಮಕ್ಕಳ ಪೈಕಿ ಒಬ್ಬ ಮಗುವಿಗೆ ನಾಲ್ಕು ವರ್ಷ ಹಾಗೂ ಇನ್ನೊಂದು ಮಗು ಒಂದು ತಿಂಗಳ ಒಳಗಿನದ್ದು ಎಂದು ಅಂದಾಜಿಸಲಾಗಿದೆ. ಈ ಮೂವರೂ ಒಂದೇ ಕುಟುಂಬದ ಸಹೋದರರನ್ನು ಮದುವೆಯಾಗಿದ್ದರು. ಮತ್ತೊಂದು ದುಃಖದಾಯಕ ಸಂಗತಿ ಎಂದರೆ ಸಾವಿಗೀಡಾದ ಮೂವರು ಸಹೋದರಿಯರ ಪೈಕಿ ಇಬ್ಬರು ಗರ್ಭಿಣಿಯರಾಗಿದ್ದರು. ಕಲು ಮೀನಗೆ ಇಬ್ಬರು ಮಕ್ಕಳಿದ್ದರೆ, ಮಮತಾ ಮತ್ತು ಕಮ್ಲೇಶ್ ಗರ್ಭಿಣಿಯರಾಗಿದ್ದರು.
ಈ ಸಂಬಂಧ ಸಾವಿಗೀಡಾದ ಸಹೋದರಿಯರ ತಂದೆ ಪೊಲೀಸರಿಗೆ ದೂರು ನೀಡಿದ್ದು, ಎಲ್ಲ ಸಹೋದರಿಯರ ಗಂಡಂದಿರು ಮತ್ತು ಅತ್ತೆ-ಮಾವಂದಿರ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಮೇ 25ರಂದು ತಂದೆಗೆ ಕರೆ ಮಾಡಿದ್ದ ಕಿರಿಯ ಪುತ್ರಿ ಕಮ್ಲೇಶ್, ಇಲ್ಲಿ ನಮಗೆ ಗಂಡಂದಿರು ಮತ್ತು ಅವರ ಮನೆಯವರು ಹೊಡೆದು ಹಿಂಸೆ ಕೊಡುತ್ತಾರೆ ಎಂದು ಹೇಳಿಕೊಂಡಿದ್ದಳು. ನನ್ನ ಮಕ್ಕಳನ್ನು ಗಂಡಂದಿರು ಮತ್ತು ಅವರ ಮನೆಯವರು ಸೇರಿ ಕೊಲೆ ಮಾಡಿ ಬಾವಿಗೆ ಹಾಕಿದ್ದಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸಾವಿಗೆ ನಿಜವಾದ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಲಿದೆ. ಅಪರಾಧದ ಸನ್ನಿವೇಶವನ್ನು ಗಮನಿಸಿದರೆ ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣಿಸುತ್ತದೆ. ತನಿಖೆ ಬಳಿಕ ಖಚಿತ ಕಾರಣ ತಿಳಿದು ಬರಲಿದೆ ಎಂದು ಜೈಪುರ ಗ್ರಾಮೀಣ ಎಸ್​ಪಿ ಮನೀಶ್ ಅಗರ್​ವಾಲ್​ ತಿಳಿಸಿದ್ದಾರೆ.
ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!
ಆರೂವರೆ ವರ್ಷ ಐಸಿಯುನಲ್ಲಿ, 9.5 ಕೋಟಿ ರೂ. ಖರ್ಚು; ಅದಾಗ್ಯೂ ಬದುಕದ ಮಹಿಳೆ, ಇಂದು ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − three =
Remember me
