ಸಹಾರನ್​​ಪುರ: ತಮ್ಮ ನೆಚ್ಚಿನ ಟಿವಿ ಧಾರಾವಾಹಿ ನೋಡುವ ಸಲುವಾಗಿ ಉಂಟಾದ ವಾಗ್ವಾದದಿಂದಾಗಿ ಮೂವರು ಸಹೋದರಿಯರು ಕೀಟನಾಶಕ ಸೇವಿಸಿರುವ ದುರಂತ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ನಂಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭಾಲಸ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮೂವರು ಸಹೋದರಿಯರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು, ಅವರಲ್ಲಿ ಒಬ್ಬಾಕೆ ತೀವ್ರ ಗಾಯದಿಂದಾಗಿ ಸಾವಿಗೀಡಾಗಿದ್ದಾಳೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ನಿಗಾಕ್ಕೆ ಶಿಫಾರಸ್ಸು ಮಾಡಲಾಗಿದೆ.ಈ ಮೂವರು ಸಹೋದರಿಯರನ್ನು ರೀಟಾ, ಶೀತಲ್ ಮತ್ತು ತನು ಎಂದು ಗುರುತಿಸಲಾಗಿದೆ. ಅವರ ತಂದೆ ಪಿಒಪಿ ಕೆಲಸಗಾರರಾಗಿದ್ದಾರೆ.
ಇದನ್ನೂ ಓದಿ:ಕರೊನಾಗೆ ಬಾಬಾ ರಾಮ್​ದೇವ್​ ಅವರ ‘ಕರೊನಿಲ್’ ರಾಮಬಾಣವಂತೆ; ಇದಕ್ಕೆ ನೆಟ್ಟಿಗರು ಏನಂತಾರೆ…!
ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ, ತಮ್ಮ ಮನೆಯ ಎಲ್ಲ ಕೆಲಸ ಮುಗಿದ ನಂತರ ಮೂವರು ಸಹೋದರಿಯರು ಟಿವಿ ನೋಡಲು ಕುಳಿತರು. ಆದರೆ ಸ್ವಲ್ಪ ಸಮಯದ ನಂತರ, ಮೂವರೂ ತಮ್ಮದೇ ನೆಚ್ಚಿನ ಟಿವಿ ಧಾರಾವಾಹಿಗಳನ್ನು ನೋಡುವ ಬಗ್ಗೆ ವಾದಿಸಲು ಪ್ರಾರಂಭಿಸಿದರು. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಈ ಮೂವರು ಗೋಧಿ ಬೆಳೆಗೆ ಹೊಡೆಯುವ ಕೀಟನಾಶಕ ಸೇವಿಸಿದರು.ತಕ್ಷಣವೇ ಕುಟುಂಬಸ್ಥರು ಮತ್ತು ಇತರ ಗ್ರಾಮಸ್ಥರು ಸಂತ್ರಸ್ತರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಚಿಕಿತ್ಸೆಯ ಸಮಯದಲ್ಲಿ ರೀಟಾ ಸಾವನ್ನಪ್ಪಿದ್ದಾಳೆ. ಶೀತಲ್ ಮತ್ತು ತನು ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರು ರೋಗಿಗಳನ್ನು ಉನ್ನತ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 5 =
Remember me
