ಅಜಂಗಡ :ತಾಯಿ ನೀರು ತರಲು ಆಚೆ ಹೋದಾಗ ಮನೆಯಲ್ಲಿದ್ದ ಮೂವರು ಹೆಣ್ಣುಮಕ್ಕಳು ಗ್ಯಾಸ್​ ಸಿಲಿಂಡರ್​ಗೆ ಬೆಂಕಿ ಹತ್ತಿಕೊಂಡ ಕಾರಣ ದುರಂತ ಸಾವಿಗೀಡಾಗಿರುವ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಬೆಂಕಿಯ ಜ್ವಾಲೆಗಳಿಗೆ ಸಿಲುಕಿದ್ದ ಈ ಸೋದರಿಯರನ್ನು ಉಳಿಸಲು ಅಕ್ಕಪಕ್ಕದವರು ಮಾಡಿದ ಪ್ರಯತ್ನ ವಿಫಲವಾಗಿದೆ.
ಅಜಂಗಡದ ಆಹ್ರೌಲಾ ಪ್ರದೇಶದ ಇಮಾಮ್​ಗಡ ಗ್ರಾಮದಲ್ಲಿ ಭಾನುವಾರ ಸಂಜೆ 11 ವರ್ಷದ ದೀಪಾಂಜಲಿ, 6 ವರ್ಷದ ಶಿವಾಂಶಿ ಮತ್ತು 4 ವರ್ಷದ ಶ್ರೇಜಲ್​ ಅಡುಗೆಮನೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಅವರ ತಾಯಿ ನೀರು ತರುವುದಕ್ಕೆ ಹೊರಗೆ ಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಪೆಗಾಸಸ್ ಬಿಕ್ಕಟ್ಟು, ಪ್ರಧಾನಿ ಮಧ್ಯಪ್ರವೇಶಕ್ಕೆ ವಿಪಕ್ಷ ಪಟ್ಟು
ಅಡುಗೆಕೋಣೆಯ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಕೂಗೆಬ್ಬಿಸಿದ ಬಾಲಕಿಯರ ಸಹಾಯಕ್ಕೆ ಬಂದ ನೆರೆಹೊರೆಯ ಜನ, ಬೆಂಕಿಯನ್ನು ನಂದಿಸಿ, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದೀಪಾಂಜಲಿ ಮತ್ತು ಶಿವಾಂಶಿ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರೆ, ಶ್ರೇಜಲ್​ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)
ಹಾಕಿ ಆಟಗಾರ್ತಿಗೆ ಗೌರವಗಳ ಬುತ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಯಭಾರಿ!

ವಿಶ್ವದ ಅತಿ ಎತ್ತರದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಲೋಕಾರ್ಪಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
