ಚೆನ್ನೈ:ಜೀವಂತ ಹಾವಿನ ತಲೆಯನ್ನು ಕಡಿದು, ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೂವರು ಯುವಕರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಯಿನೂರು ಮೂಲದ ಮೋಹನ್​, ಸೂರ್ಯ ಮತ್ತು ಸಂತೋಷ್​ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಪರಿಸರ ಪ್ರೇಮಿಗಳ ಗುಂಪು ತಮಿಳುನಾಡು ಅರಣ್ಯ ಇಲಾಖೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ
ಈ ಹಿಂದೆ ಮೋಹನ್ ಕೈಗೆ ಹಾವು ಕಚ್ಚಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಹಾವನ್ನು ಕೊಲ್ಲಲು ಮುಂದಾಗಿದ್ದಾಗಿ ಯುವಕರು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇನ್ನಿಬ್ಬರು ಯುವಕರು ಹಾವನ್ನು ಬಿಡುವಂತೆ ಮೋಹನ್‌ಗೆ ಕೇಳಿಕೊಂಡರೂ ಆತ ಕೇಳಲಿಲ್ಲ. ನಂತರ ಹಾವಿನ ತಲೆಯನ್ನು ಕಚ್ಚಿ, ತುಂಡರಿಸಿದ್ದಾರೆ. ಹಾವಿನ ಕತ್ತರಿಸಿದ ತಲೆ ಮತ್ತು ದೇಹದ ದೃಶ್ಯಗಳನ್ನು ಚಿತ್ರೀಕರಿಸಿದಾಗ ಯುವಕರು ನಗುವುದನ್ನು ವಿಡಿಯೋದಲ್ಲಿ ಕೇಳಬಹುದು.
ಈ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಡು ಪ್ರಾಣಿಗಳಿಗೆ ಕಿರುಕುಳ ನೀಡಿ ಸಾವಿಗೆ ಕಾರಣವಾದ ಆರೋಪವನ್ನು ಮೂವರ ಮೇಲೆ ಹೊರಿಸಲಾಗಿದೆ.(ಏಜೆನ್ಸೀಸ್​)
ಮಗಳಿಗಾಗಿ 77 ಕೆಜಿ ಕಳೆದುಕೊಂಡ ತಂದೆ; ಆಕೆಯ ದುಃಖ ಭರಿತ ಮುಖ ಜೀವನವನ್ನೇ ಬದಲಿಸಿತು!

ಕರ್ನಾಟಕ ವಿಧಾನಸಭಾ ಚುನಾವಣೆ: 42 ಅಭ್ಯರ್ಥಿಗಳ ಕಾಂಗ್ರೆಸ್ 2ನೇ ಪಟ್ಟಿ ರಿಲೀಸ್​, ಕೋಲಾರ ಇನ್ನೂ ನಿಗೂಢ

ಹನುಮಂತನಂತೆ ಏನು ಬೇಕಾದ್ರೂ ಮಾಡಬಲ್ಲೆ ಎಂಬ ಮನೋಭಾವವನ್ನು ಬಿಜೆಪಿ ಹೊಂದಿದೆ: ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
