ನವದೆಹಲಿ:ಟ್ರಾಫಿಕ್​ ರೂಲ್ಸ್​ ಪಾಲಿಸದಿದ್ರೆ ದಂಡ ಬೀಳುತ್ತೆ. ಆದ್ದರಿಂದ ಎಲ್ಲರೂ ಟ್ರಾಫಿಕ್​​​ ನಿಯಮಗಳನ್ನು ಪಾಲಿಸಲೆಬೇಕು. ದಂಡ ಪಾವತಿಸುವ ಬದಲು ಪೊಲೀಸರು ಲಂಚ ಕೇಳುತ್ತಾರೆ ಎಂದು ಜನರು ಆರೋಪಿಸುವುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಲಂಚ ಪಡೆದ ಹಣವನ್ನು ಮೂವರು ಪೊಲೀಸರು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
ಇದನ್ನು ಓದಿ:ಏರ್​ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಅಪರಿಚಿತನಿಂದ ಹಲ್ಲೆ; ಏರ್​ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದಿಷ್ಟು..​​
ರಾಷ್ಟ್ರರಾಜಧಾನಿಯ ಗಾಜಿಪುರದಲ್ಲಿ ಈ ಪ್ರಕರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಚೇಕ್​ಪೋಸ್ಟ್​ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಟ್ರಾಫಿಕ್​​ ಪೊಲೀಸ್​ ವಾದ ಮಾಡುತ್ತಾರೆ. ಬಳಿಕ ಸ್ವಲ್ಪ ಸಮಯದ ನಂತರ ಪೊಲೀಸ್​ ಅಧಿಕಾರಿಯು ತನ್ನ ಹಿಂದಿನ ಮೇಜಿನ ಮೇಲೆ ಹಣ ಇಟ್ಟು ಹೋಗುವಂತೆ ಸೂಚಿಸುತ್ತಾರೆ. ವ್ಯಕ್ತಿಯೊಬ್ಬ ಹಣವಿಟ್ಟು ಹೋದ ಬಳಿಕ ಪೊಲೀಸ್​ ಕುಳಿತುಕೊಂಡು ಹಣವನ್ನು ಎಣಿಸುತ್ತಾನೆ. ಬಳಿಕ ಮೂವರು ಪೊಲೀಸ್​ ಅಧಿಕಾರಿಗಳು ಲಂಚವನ್ನು ಹಂಚಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿರುವ ಇಬ್ಬರು ಸಹಾಯಕ ಸಬ್​ಇನ್​ಸ್ಪೆಕ್ಟರ್​​ ಹಾಗೂ ಓರ್ವ ಹೆಡ್​ ಕಾನ್​ಸ್ಟೇಬಲ್​​ನನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
इस पोस्ट का संज्ञान लेते हुए, प्रारम्भिक जांच के पश्चात उक्त 3 पुलिसकर्मियों को निलंबित कर दिया गया है और उनके खिलाफ़ व्यापक विभागीय जांच की जा रही है।https://t.co/cGFIoqhxiB
ಪ್ರಾಥಮಿಕ ತನಿಖೆಯ ನಂತರ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಸಮಗ್ರ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಸಾಮಾಜಿಕ ಜಾಲತಾಣದ ಎಕ್ಸ್​ ಖಾತೆಯಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​​)
ಪಾಕ್​ ಅಥ್ಲೀಟ್​​​ ಅರ್ಷದ್​ ನದೀಮ್​ ಬಯೋಪಿಕ್​ ತೆಗೆದ್ರೆ ನಾಯಕ ಇವರಾಗ್ಬೇಕಂತೆ; ನೀರಜ್​ ಹೇಳಿದ್ದು ಈ ನಟನ ಬಗ್ಗೆ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
