ಜೈಪುರ:ಹೆಡ್​ ಕಾನ್​ಸ್ಟೆಬಲ್​ಗೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯರ ಉಪಟಳದಿಂದ ನೊಂದು ಹೆಡ್ ​ಕಾನ್​ಸ್ಟೆಬಲ್​ ನೀಡಿದ್ದ ದೂರಿನ ಮೇರೆಗೆ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಸುಖ್​​ಪ್ರೀತ್ ಕೌರ್ ದೂರು ನೀಡಿದ ಹೆಡ್ ಕಾನ್​ಸ್ಟೆಬಲ್​. ಮೂವರು ಮಹಿಳೆಯರು ವಿಡಿಯೋವೊಂದನ್ನು ಇರಿಸಿಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದುದಲ್ಲದೆ, 4 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಒಡ್ಡಿದ್ದರು ಎಂದು ಕೌರ್ ಜೈಪುರ ಕರನ್​ಪುರ ಸರ್ಕಲ್​ ಇನ್​​ಸ್ಪೆಕ್ಟರ್​ ತಿಳಿಸಿದ್ದಾರೆ.
ಕಾಣೆಯಾಗಿದ್ದ ಯುವತಿಯೊಬ್ಬಳು ತಮ್ಮ ಮನೆಯಲ್ಲಿದ್ದಾಳೆ ಎಂದು ಮಹಿಳೆಯೊಬ್ಬಳು ಕರೆ ಮಾಡಿದ್ದರಿಂದ ಅಲ್ಲಿಗೆ ಹೋಗಿದ್ದೆ. ಆಗ ಆಕೆಯೊಂದಿಗೆ ಸೇರಿಕೊಂಡ ಇನ್ನಿಬ್ಬರು ಮಹಿಳೆಯರು ಅಸಭ್ಯವಾಗಿ ವರ್ತಿಸಿ, ಅಶ್ಲೀಲವಾದ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಅದನ್ನು ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡುವುದಾಗಿ ಬೆದರಿಸಿ, ಆ ಮೂವರು 4 ಲಕ್ಷ ರೂ. ನೀಡುವಂತೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು ಎಂದು ಹೆಡ್​ ಕಾನ್​ಸ್ಟೆಬಲ್ ದೂರು ನೀಡಿದ್ದಾರೆ.
ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು: ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ?

ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
