ಚಂಡೀಗಢ:ಪದೇ ಪದೇ ಹಣಕ್ಕಾಗಿ ಸ್ನೇಹಿತೆಯನ್ನು ಪೀಡಿಸುತ್ತಿದ್ದ ಯುವಕನೊಬ್ಬ ಆಕೆ ಎರಡು ಸಾವಿರ ರೂಪಾಯಿ ನೀಡಲು ನಿರಾಕರಿಸಿದ ಕಾರಣ, ಆಕೆಯ ಮುಖಕ್ಕೆ ಸ್ಯಾನಿಟೈಸರ್‌ ಎಸೆದು ಬೆಂಕಿ ಹಚ್ಚಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
22 ವರ್ಷದ ಯುವತಿಯ ಮುಖಕ್ಕೆ ಸ್ಯಾನಿಟೈಸರ್​ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿದ್ದಾನೆ. ಯುವತಿಯ ಮುಖಕ್ಕೆ ಗಂಭೀರ ಸುಟ್ಟುಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಲ್ಲಾಂಗ್​ ಮೂಲದ ಯುವತಿ ಕಳೆದ ವರ್ಷವಷ್ಟೇ ಕೆಲಸ ಅರಸಿ ಚಂಡೀಗಢಕ್ಕೆ ಬಂದಿದ್ದಳು. ಅಲ್ಲಿ ನರೇಶನ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಒಟ್ಟಿಗೆ ಲಿವ್‌ ಇನ್‌ ರಿಲೇಷನ್‌ನಲ್ಲಿ ವಾಸಿಸುತ್ತಿದ್ದರು. ಈ ನಡುವೆ ಸರಿಯಾಗಿ ಕೆಲಸ ಇಲ್ಲದ ನರೇಶ್‌ ಸದಾ ಹಣಕ್ಕಾಗಿ ಯುವತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಮನೆಮಂದಿಗೆ ನೆಗೆಟಿವ್‌- ಸಾಕುಬೆಕ್ಕಿಗೆ ಪಾಸಿಟಿವ್‌! ತಜ್ಞರಿಗೂ ಸವಾಲು
ಪದೇ ಪದೇ ಹಣ ಕೊಟ್ಟು ರೋಸಿಹೋದ ಯುವತಿ ಅವನು ಬೇಡಿಕೆ ಒಡ್ಡಿದ್ದ ಎರಡು ಸಾವಿರ ರೂಪಾಯಿ ನೀಡಲು ನಿರಾಕರಿಸಿದ್ದಾಳೆ. ಇದೇ ಕಾರಣಕ್ಕೆ ರೊಚ್ಚಿಗೆದ್ದಿರುವ ನರೇಶ್‌, ಆಕೆಯ ಮೇಲೆ ಸ್ಯಾನಿಟೈಸರ್‌ ಎಸೆದು ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ.
ನೋವಿನಿಂದ ಚೀರಾಡಿದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಯುವತಿ ನಡೆದಿರುವ ವಿಷಯ ಹೇಳಿದ್ದಾಳೆ. ಯುವತಿಯ ಹೇಳಿಕೆ ಆಧಾರದ ಮೇಲೆ ನರೇಶ್‌ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.
ಗುರುದ್ವಾರ ಕೆಡವಿ ಮಸೀದಿ ನಿರ್ಮಾಣ: ಪಾಕ್‌ ನಡೆಗೆ ಭಾರತದ ಪ್ರಬಲ ವಿರೋಧ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − twenty =
Remember me
