ಭುವನಕ್ಕೇ ಒಡೆಯನಾದರೂ, ಜನ್ಮಭೂಮಿಯಲ್ಲಿ ಸ್ವಂತಕ್ಕೊಂದು ಮಂದಿರವಿಲ್ಲದೆ ಶತಮಾನಗಳ ‘ವನವಾಸ’ ಅನುಭವಿಸಿದ್ದ ಪ್ರಭು ರಾಮಚಂದ್ರ ಕೊನೆಗೂ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಹಲವು ದಶಕಗಳಿಂದ ಪುಟ್ಟ ಗುಡಾರದಲ್ಲಿದ್ದ ಬಾಲರಾಮ ಕೊನೆಗೂ ಅಯೋಧ್ಯೆಯಲ್ಲಿ ಭವ್ಯ, ದಿವ್ಯ ಮಂದಿರದಲ್ಲಿ ಪುನಃ ಪ್ರತಿಷ್ಠಾಪನೆಗೊಂಡಿದ್ದು, ಕೋಟ್ಯಂತರ ರಾಮಭಕ್ತರ ಪ್ರಾರ್ಥನೆ ಫಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯಾಜಮಾನ್ಯದಲ್ಲಿ ಸೋಮವಾರ ಪ್ರಾಣಪ್ರತಿಷ್ಠಾಪನೆ ಸಂಪನ್ನಗೊಳ್ಳುತ್ತಿದ್ದಂತೆಯೇ ಬಾಲರಾಮನ ದಿವ್ಯದರ್ಶನವನ್ನು ನೂರಾರು ಕೋಟಿ ಕಂಗಳು ಕಣ್ತುಂಬಿಕೊಂಡವು. ಅಯೋಧ್ಯೆಯಲ್ಲಿ 8000ಕ್ಕೂ ಅಧಿಕ ಗಣ್ಯರು, ಸಹಸ್ರಾರು ಭಕ್ತರು ಹಾಜರಿದ್ದರೆ, ನೂರಾರು ದೇಶಗಳ ಭಕ್ತರು ತಾವಿದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಿದರು. ಮೆಕ್ಸಿಕೋ ಸೇರಿ ವಿವಿಧೆಡೆ ರಾಮಮಂದಿರಗಳು ಉದ್ಘಾಟನೆಗೊಂಡವು. ದೇಶಾದ್ಯಂತ ರಾಮತಾರಕ ಯಜ್ಞ, ವಿಶೇಷ ಪೂಜೆ, ಹೋಮ-ಹವನ ನಡೆಸಲಾಯಿತು.
ಬಾಲರಾಮನಿಗೆ ಆಟಿಕೆಗಳು…!:ಐದು ವರ್ಷ ಪ್ರಾಯದ ಬಾಲರಾಮ ಪ್ರತಿಷ್ಠಾಪನೆಗೊಂಡಿರುವುದರಿಂದ ಗರ್ಭಗುಡಿಯಲ್ಲಿ ಶ್ರೀರಾಮನ ಚರಣಗಳಲ್ಲಿ ಆಟಿಕೆಗಳನ್ನು ಇಡಲಾಗಿದೆ. ಗಿಲಿಗಿಲಿ, ಆನೆ, ಒಂಟೆ, ಕುದುರೆ, ಗಾಡಿ ಹಾಗೂ ಲಾಡುವನ್ನು ಇಡಲಾಗಿದೆ.
ಗರ್ಭಗುಡಿಯಲ್ಲಿ ಉಪಸ್ಥಿತಿ:ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಟ್ರಸ್ಟ್ ಸದಸ್ಯ ಗೋವಿಂದ ಗಿರಿ ಮಹಾರಾಜ್, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 16 =
Remember me
