ನವದೆಹಲಿ: ಲಾಕ್​ಡೌನ್​ ಅವಧಿ ಪೂರ್ಣಗೊಂಡ ನಂತರ ರೈಲು ಹಾಗೂ ವಿಮಾನಗಳ ಸಂಚಾರ ಮತ್ತೆ ಆರಂಭವಾಗಲಿದೆ.
ಸದ್ಯ ಏಪ್ರಿಲ್​ 14ರವರೆಗೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಈ ಅವಧಿಯನ್ನು ಮುಂದುವರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಭರವಸೆ ಕಾರಣದಿಂದಾಗಿ ವಿಮಾನ ಯಾನ ಸಂಸ್ಥೆಗಳು ಬುಕಿಂಗ್​ ಆರಂಭಿಸಿವೆ. ಈ ಬಗ್ಗೆ ಪ್ರಯಾಣಿಕರು ಸಂಸ್ಥೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕೆಲ ವಿಮಾನ ಯಾನ ಸಂಸ್ಥೆಗಳು ಬುಕಿಂಗ್​ ಶುರುವಾಗಿದೆ ಎಂದು ವೆಬ್​ಸೈಟ್​ನಲ್ಲಿ ಪ್ರಕಟಿಸಿವೆ. ಸ್ಪೈಸ್​ ಜೆಟ್​, ಇಂಡಿಗೋ, ಗೋ ಏರ್​ ಮೊದಲಾದ ಸಂಸ್ಥೆಗಳು ಏಪ್ರಿಲ್​ 15 ರ ಬಳಿಕ ದೇಶೀಯ ಯಾನಕ್ಕೆ ಬುಕಿಂಗ್​ ಲಭ್ಯವಿದೆ ಎಂದು ಘೋಷಿಸಿವೆ. ಆದರೆ, ಈ ಕುರಿತು ಅಧಿಕೃತ ಪ್ರಕಟನೆಯನ್ನು ಈವರೆಗೂ ಹೊರಡಿಸಿಲ್ಲ. ಹೀಗಾಗಿ ಪ್ರಯಾಣಿಕರಲ್ಲಿ ಬುಕಿಂಗ್​ ಮಾಡಬೇಕೋ ಬೇಡವೋ ಎಂಬ ಗೊಂದಲ ಮುಂದುವರಿಯಲು ಕಾರಣವಾಗಿದೆ.
ರೈಲ್ವೆ ಮುಂಗಡ ಕಾದಿರಿಸುವಿಕೆ ನಿಲ್ಲಿಸಿಲ್ಲಟಿಕೆಟ್​ ಮುಂಗಡ ಕಾದಿರಿಸುವಿಕೆಯನ್ನು ರದ್ದು ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ. 120 ದಿನ ಮುಂಚಿತವಾಗಿ ಟಿಕೆಟ್​ ಕಾದಿರಿಸುವ ವ್ಯವಸ್ಥೆ ಹಿಂದಿನಂತೆ ಈಗಲೂ ಮುಂದುವರಿದಿದೆ. ಲಾಕ್​ಡೌನ್​ ಅವಧಿ ಹೊರತುಪಡಿಸಿ ಉಳಿದ ಅವಧೀಗೆ ಈಗಲೂ ಕಾದಿರಿಸಬಹುದು ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಏಪ್ರಿಲ್​ 15 ಹಾಗೂ ಅದರ ನಂತರದ ಅವಧಿಗೆ ಮೊದಲಿನಿಂದಲೇ ಮುಂಗಡ ಟಿಕೆಟ್​ ಕಾದಿರಿಸಲಾಗಿದೆ. ಆದ್ದರಿಂದ ಯಾರಾದರೂ ಈ ಟಿಕೆಟ್​ ರದ್ದು ಪಡಿಸುವುದಾದಲ್ಲಿ ಅವರಿಗೆ ಜೂನ್​ 21ರವರೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್​ಡೌನ್​ ಬಳಿಕ ಮನೆಯಲ್ಲಿ ಇರುವ ಪುರುಷರು ಪತ್ನಿಯರಿಗೆ ಹಿಂಸೆ ನೀಡುತ್ತಿದ್ದಾರೆಯೇ? ಹೌದು ಅನ್ನುತ್ತಿದೆ ಮಹಿಳಾ ಆಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
